ಎಫ್‌ಐಎಚ್ ರ‍್ಯಾಂಕಿಂಗ್ ಐದನೇ ಸ್ಥಾನ ಕಾಯ್ದುಕೊಂಡ ಭಾರತದ ಪುರುಷರ ತಂಡ

Update: 2019-09-08 18:53 GMT

ಲಾಸನ್ನೆ(ಸ್ವಿಟ್ಝರ್ಲೆಂಡ್), ಸೆ.8: ರವಿವಾರ ಬಿಡುಗಡೆಯಾದ ಎಫ್‌ಐಎಚ್ ರ್ಯಾಂಕಿಂಗ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಐದನೇ ಸ್ಥಾನ ತಲುಪಿದರೆ, ಮಹಿಳಾ ತಂಡ 9ನೇ ಸ್ಥಾನಕ್ಕೇರಿದೆ.

ಒಶಿಯಾನಿಯ ಕಪ್ ಕೊನೆಗೊಂಡ ಬಳಿಕ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದೆ.ರ್ಯಾಂಕಿಂಗ್‌ನಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಒಶಿಯಾನಿಯಾ ಕಪ್ ಚಾಂಪಿಯನ್ ಆಸ್ಟ್ರೇಲಿಯ ನಂ.1 ಸ್ಥಾನ ಕಾಯ್ದುಕೊಂಡರೆ, ಬೆಲ್ಜಿಯಂ ಎರಡನೇ ಸ್ಥಾನದಲ್ಲಿದೆ. ಈ ಎರಡು ತಂಡಗಳ ನಡುವೆ ಕೇವಲ ಎರಡು ಅಂಕ ವ್ಯತ್ಯಾಸವಿದೆ. ಆಸ್ಟ್ರೇಲಿಯ 2,350 ಅಂಕ ಗಳಿಸಿದೆ.

ಹಾಲೆಂಡ್(2,155)ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಪಾನ್ ಅಮೆರಿಕ ಗೇಮ್ಸ್ ಚಾಂಪಿಯನ್ ಅರ್ಜೆಂಟೀನ(1988)ನಾಲ್ಕನೇ ಸ್ಥಾನದಲ್ಲಿದೆ. ಭಾರತ(1823)ಐದನೇ ಸ್ಥಾನದಲ್ಲಿ ಮುಂದುವರಿದಿದೆ. ಜರ್ಮನಿ(1770) ಒಂದು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನ ತಲುಪಿದರೆ, ಇಂಗ್ಲೆಂಡ್(1679)ಏಳನೇ ಸ್ಥಾನದಲ್ಲಿದೆ. ಸ್ಪೇನ್(1510)9ನೇ ಸ್ಥಾನದಿಂದ 8ನೇ ಸ್ಥಾನ ತಲುಪಿದೆ. ನ್ಯೂಝಿಲ್ಯಾಂಡ್(1459)9ನೇ ಹಾಗೂ ಕೆನಡಾ(1325)ಅಗ್ರ-10ರಲ್ಲಿದೆ.

ಮಹಿಳಾ ಹಾಕಿ ರ್ಯಾಂಕಿಂಗ್‌ನಲ್ಲಿ ಹಾಲೆಂಡ್ ತಂಡ ಬೆಲ್‌ಫಿಯಸ್ ಯುರೋ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಯಶಸ್ಸು ಸಾಧಿಸುವುದರೊಂದಿಗೆ ನಂ.1 ಸ್ಥಾನ ಉಳಿಸಿಕೊಂಡಿದೆ. ಆಸ್ಟ್ರೇಲಿಯ ಎರಡನೇ ಸ್ಥಾನ ಹಾಗೂ ಪಾನ್ ಅಮೆರಿಕ ಗೇಮ್ಸ್ ಚಾಂಪಿಯನ್ ಅರ್ಜೆಂಟೀನ ಮೂರನೇ ಸ್ಥಾನ ಉಳಿಸಿಕೊಂಡಿದೆ. ಜರ್ಮನಿ ವಿಶ್ವದ ನಾಲ್ಕನೇ ಶ್ರೇಷ್ಠ ತಂಡವಾಗಿದ್ದರೆ, ಇಂಗ್ಲೆಂಡ್ ಇದೀಗ 5ನೇ ಸ್ಥಾನ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News