ಮನಿಲಾ: ಪತ್ರಕರ್ತ ರವೀಶ್ ಕುಮಾರ್ ರಿಗೆ ಏಷ್ಯಾದ ನೊಬೆಲ್ ಖ್ಯಾತಿಯ ‘ಮ್ಯಾಗ್ಸೆಸೆ ಪ್ರಶಸ್ತಿ’ ಪ್ರದಾನ

Update: 2019-09-09 09:44 GMT
Photo: facebook.com/magsaysayaward 

ಮನಿಲಾ, ಸೆ.9: ನಿರ್ಭೀತ ಪತ್ರಕರ್ತ, ಎನ್ ಡಿಟಿವಿಯ ರವೀಶ್ ಕುಮಾರ್ ರಿಗೆ ಫಿಲಿಪ್ಪೀನ್ಸ್ ನ ಮನಿಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಏಷ್ಯಾದ ನೊಬೆಲ್ ಖ್ಯಾತಿಯ ‘ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ’ ಪ್ರದಾನಿಸಿ ಗೌರವಿಸಲಾಯಿತು.

‘ಧ್ವನಿಯಿಲ್ಲದವರಿಗೆ ಧ್ವನಿಯಾದ’ ಪತ್ರಕರ್ತ ಎಂದು ರವೀಶ್ ಕುಮಾರ್ ರಿಗೆ ಈ ಗೌರವ ಪ್ರದಾನಿಸಿ ಗೌರವಿಸಲಾಯಿತು,

“ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಅಮುಕಲಾಗುತ್ತಿದೆ. ಅಸಹಿಷ್ಣುತೆ ಹೆಚ್ಚುತ್ತಿದೆ. ಇದರ ವಿರುದ್ಧ ಧ್ವನಿಯೆತ್ತಿದವರು ರವೀಶ್ ಕುಮಾರ್. ಬಡವರ ಜೊತೆ ಸುಲಭವಾಗಿ ಬೆರೆಯುವ ರವೀಶ್, ತನ್ನ ವೀಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿರುವವರು. ಸುಳ್ಳು ಸುದ್ದಿಗಳ ವಿರುದ್ಧ ಧ್ವನಿಯೆತ್ತಿದ ನೇರ ನಡೆ-ನುಡಿಯ ರವೀಶ್ ಕುಮಾರ್ ರಿಗೆ ಬೆದರಿಕೆಗಳು ಬಂದವು. ಅವರನ್ನು ನಿಂದಿಸಲಾಯಿತು” ಎಂದು ಪ್ರಶಸ್ತಿ ಪ್ರದಾನಕ್ಕೂ ಮೊದಲು ವಿವರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News