ಹಾಲು ಲೀಟರ್ ಒಂದಕ್ಕೆ 140 ರೂ.!: ಪೆಟ್ರೋಲ್, ಡೀಸೆಲ್ ಗಿಂತಲೂ ದುಬಾರಿ

Update: 2019-09-11 08:57 GMT

ಕರಾಚಿ, ಸೆ.11: ಪಾಕಿಸ್ತಾನದ ಎಲ್ಲಾ ಪ್ರಮುಖ ನಗರಗಳಲ್ಲಿ ಹಾಲಿನ ದರ ಮುಹರ್ರಂ ದಿನ ನಿಯಂತ್ರಣ ಮೀರಿ ಏರಿಕೆಯಾಗಿದೆ. ಕರಾಚಿ ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಹಾಲಿನ ದರ ಲೀಟರ್ ಗೆ 140 ರೂ. ತಲುಪಿದೆ. ಅಚ್ಚರಿಯೆಂದರೆ ಪಾಕಿಸ್ತಾನದಲ್ಲಿ ಹಾಲಿನ ಬೆಲೆಗಿಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಕಡಿಮೆ. ಪೆಟ್ರೋಲ್ ಬೆಲೆ ಲೀಟರ್ ಗೆ 113 ರೂ. ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‍ ಗೆ ರೂ 91 ಆಗಿದೆ.

ಬೇಡಿಕೆ ಹೆಚ್ಚಿದ್ದರಿಂದ ಕರಾಚಿಯ ಹಲವೆಡೆ ಹಾಲಿನ ಬೆಲೆ ಲೀಟರ್ ಗೆ 120 ರೂ.ಗಳಿಂದ 140 ರೂ. ತನಕ ಏರಿದೆ ಎಂದು ಒಬ್ಬ ಅಂಗಡಿ ಮಾಲಕ ಹೇಳಿದ್ದಾರೆ.

ಮುಹರ್ರಂ ಸಂದರ್ಭ  ಸಬೀಲ್ (ಸ್ಟಾಲ್) ನಗರದ ವಿವಿಧೆಡೆ ಹಾಲು, ಹಣ್ಣಿನ ರಸ ಹಾಗೂ ತಂಪು ನೀರನ್ನು ಮಾರಾಟ ಮಾಡಲು  ಸ್ಥಾಪಿಸಲಾಗುತ್ತದೆ. ಮೊಹರ್ರಂ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಅನುಕೂಲವಾಗಲೆಂದು ಈ  ಸ್ಟಾಲ್ ಗಳನ್ನು ಸ್ಥಾಪಿಸಲಾಗುತ್ತದೆ. ಇದೇ ಕಾರಣದಿಂದ ಹಾಲಿನ ಬೆಲೆ ಏರಿಕೆ ಕಂಡಿದೆ.

ಹಾಲಿನ ಬೆಲೆ ನಿಯಂತ್ರಣದ ಜವಾಬ್ದಾರಿ ಹೊತ್ತಿರುವ  ಆಯುಕ್ತ ಇಫ್ತಿಕರ್ ಶಲ್ವಾನಿ ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರು ವ್ಯಾಪಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News