ಪ್ರಮೋದ್ ಕುಮಾರ್ ಮಿಶ್ರಾ ಪ್ರಧಾನ ಮಂತ್ರಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಪಿ.ಕೆ.ಸಿನ್ಹಾ ಸಲಹೆಗಾರರಾಗಿ ನೇಮಕ

Update: 2019-09-11 10:05 GMT

 ಹೊಸದಿಲ್ಲಿ, ಸೆ.11: ನಿವೃತ್ತ ಐಎಎಸ್ ಅಧಿಕಾರಿ ಪ್ರಮೋದ್ ಕುಮಾರ್ ಮಿಶ್ರಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ತಮ್ಮ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಪ್ರಧಾನ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ಪ್ರಧಾನ ಮಂತ್ರಿ ಕಚೇರಿಯಿಂದ ನೃಪೇಂದ್ರ ಮಿಶ್ರಾ ನಿರ್ಗಮಿಸಿದ ಎರಡು ದೊಡ್ಡ ಬದಲಾವಣೆಯಾಗಿದೆ. ನರೇಂದ್ರ ಮೋದಿಯವರು 2014 ರಲ್ಲಿ ದಿಲ್ಲಿಗೆ ಬಂದಾಗ ಪಿಎಂಒಗೆ ನೇಮಕಗೊಂಡ ಮೊದಲ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ನೃಪೇಂದ್ರ ಮಿಶ್ರಾ ಅವರು ಕಳೆದ ತಿಂಗಳು ಪ್ರಧಾನಮಂತ್ರಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪಿ.ಕೆ.ಮಿಶ್ರಾ ಅವರು ಕಳೆದ ಐದು ವರ್ಷಗಳಿಂದ ಪ್ರಧಾನಮಂತ್ರಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಎರಡು ದಶಕಗಳಿಂದ ಪರಸ್ಪರ ಪರಿಚಿತರಾಗಿದ್ದಾರೆ.

2001 ರಲ್ಲಿ ನರೇಂದ್ರ ಮೋದಿಯವರನ್ನು ರಾಜ್ಯದ ಉಸ್ತುವಾರಿ ವಹಿಸಿಕೊಳ್ಳಲು ಗುಜರಾತ್ಗೆ ಮೊದಲ ಬಾರಿಗೆ ಕಳುಹಿಸಿದಾಗ, ಪಿಕೆ ಮಿಶ್ರಾ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ಅವರ ಉನ್ನತ ಸಹಾಯಕರಾಗಿದ್ದರು ಮತ್ತು ಮುಂದಿನ ಕೆಲವು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News