ಕೇಂದ್ರದಿಂದ 50,000 ಕೋ.ರೂ.ವೆಚ್ಚದ ರಫ್ತು ಉತ್ತೇಜನ ಯೋಜನೆ ಘೋಷಣೆ

Update: 2019-09-14 14:14 GMT

ಹೊಸದಿಲ್ಲಿ,ಸೆ.14: ರಫ್ತುದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಫ್ತು ಉತ್ಪನ್ನಗಳ ಮೇಲಿನ ಸುಂಕಗಳು ಅಥವಾ ತೆರಿಗೆಗಳಲ್ಲಿ ರಿಯಾಯಿತಿಯನ್ನು ನೀಡುವ ಹೊಸ ಯೋಜನೆ (ಆರ್‌ಒಡಿಟಿಇಪಿ)ಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಪ್ರಕಟಿಸಿದ್ದಾರೆ. ಈ ಯೋಜನೆಯಿಂದ ಸರಕಾರದ ಬೊಕ್ಕಸಕ್ಕೆ ಅಂದಾಜು 50,000 ಕೋ.ರೂ. ವೆಚ್ಚವಾಗಲಿದೆ.

ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಇದೇ ತಿಂಗಳಲ್ಲಿ ದೇಶದ ರಪ್ತು ಪ್ರಮಾಣ ಶೇ.6.05ರಷ್ಟು ಕುಸಿದು 26.13 ಶತಕೋಟಿ ಡಾ.ಗಳಿಗೆ ತಲುಪಿರುವ ಹಿನ್ನೆಲೆಯಲ್ಲಿ ವಿತ್ತಸಚಿವರ ಈ ಪ್ರಕಟಣೆ ಹೊರಬಿದ್ದಿದೆ.

ಜಿಎಸ್‌ಟಿಯಲ್ಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ)ಗಳಿಗಾಗಿ ಸಂಪೂರ್ಣ ಸ್ವಯಂಚಾಲಿತ ವಿದ್ಯುನ್ಮಾನ ಮರುಪಾವತಿ ವ್ಯವಸ್ಥೆಯನ್ನು ಈ ತಿಂಗಳಾಂತ್ಯದಲ್ಲಿ ಅನುಷ್ಠಾನಿಸುವುದಾಗಿಯೂ ಸಚಿವೆ ಹೇಳಿದರು.

ಹಾಲಿ ಇರುವ ಉತ್ತೇಜಕ ಯೋಜನೆಗಳ ಬದಲಿಗೆ ಆರ್‌ಒಡಿಟಿಇಪಿ ಅನ್ನು ತರಲಾಗುತ್ತಿದ್ದು,ರಫ್ತುದಾರರಿಗೆ ಈಗಿರುವ ಎಲ್ಲ ಯೋಜನೆಗಳಿಗಿಂತ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News