ಹರ್ಯಾಣ ಕ್ರೀಡಾ ವಿವಿಗೆ ಕಪಿಲ್‌ದೇವ್ ಮೊದಲ ಕುಲಪತಿ?

Update: 2019-09-14 18:33 GMT

ಹೊಸದಿಲ್ಲಿ, ಸೆ.14: ಭಾರತದ ಕ್ರಿಕೆಟ್ ದಂತಕತೆ ಕಪಿಲ್‌ದೇವ್ ಹರ್ಯಾಣ ಕ್ರೀಡಾ ವಿಶ್ವ ವಿದ್ಯಾಲಯದ ಮೊದಲ ಕುಲಪತಿ ಆಗುವ ಸಾಧ್ಯತೆಯಿದೆ. ರಾಜ್ಯ ಕ್ರೀಡಾ ಸಚಿವ ಅನಿಲ್ ವಿಜ್ ಶನಿವಾರ ಈ ವಿಚಾರವನ್ನು ಬಹಿರಂಗಪಡಿಸಿದರು.

ಹರ್ಯಾಣ ಸೋನೆಪತ್‌ನ ರಾಯ್‌ನಲ್ಲಿ ತನ್ನ ಮೊತ್ತ ಮೊದಲ ಸುಸಜ್ಜಿತ ಕ್ರೀಡಾ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ಅಣಿಯಾಗಿದೆ.

‘‘ರಾಷ್ಟ್ರಪತಿ ಅವರಿಂದ ವಿಶ್ವವಿದ್ಯಾಲಯಕ್ಕೆ ಅಂತಿಮ ಅನುಮೋದನೆ ಇನ್ನಷ್ಟೇ ಸಿಗಬೇಕಾಗಿದೆ. ಆದರೆ ಉಳಿದೆಲ್ಲಾ ಔಪಚಾರಿಕತೆ ಪೂರ್ಣಗೊಂಡಿದೆ. ನಮ್ಮ ಕ್ರೀಡಾ ವಿವಿಗೆ ಕಪಿಲ್‌ದೇವ್ ಕುಲಪತಿ ಆಗಲಿದ್ದಾರೆ ಎಂದು ನಾವು ಇಂದು ನಿರ್ಧರಿಸಿದ್ದೇವೆ.ನಾನು ಖುದ್ದಾಗಿ ಈ ಕುರಿತು ಕಪಿಲ್‌ದೇವ್ ಬಳಿ ಮಾತನಾಡಿದ್ದೇನೆ. ಅವರು ಕೂಡ ತನ್ನ ಸಮ್ಮತಿ ಸೂಚಿಸಿದ್ದಾರೆ’’ ಎಂದು ಅನಿಲ್ ವಿಜ್ ಹೇಳಿದ್ದಾರೆ.

1975ರ ನವೆಂಬರ್‌ನಲ್ಲಿ ಕಪಿಲ್‌ದೇವ್ ಹರ್ಯಾಣದ ದೇಶೀಯ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. ಆರು ವಿಕೆಟ್ ಗೊಂಚಲು ಪಡೆದಿದ್ದ ಅವರು ಪಂಜಾಬ್ ತಂಡವನ್ನು ಕೇವಲ 63 ರನ್‌ಗೆ ನಿಯಂತ್ರಿಸಿ ಹರ್ಯಾಣಕ್ಕೆ ಜಯ ತಂದಿದ್ದರು.

 ಹರ್ಯಾಣದ ಕ್ರೀಡಾ ವಿವಿ ರಾಜ್ಯ ಸರಕಾರದಿಂದ ಸ್ಥಾಪಿಸಲ್ಪಟ್ಟಿರುವ ದೇಶದ ಮೂರನೇ ಕ್ರೀಡಾ ವಿವಿ ಎನಿಸಿಕೊಳ್ಳಲಿದೆ. ಸ್ವರ್ಣಿಂ ಗುಜರಾತ್ ಸ್ಪೋರ್ಟ್ಸ್ ಯುನಿವರ್ಸಿಟಿ(ಗಾಂಧಿ ನಗರ) ಹಾಗೂ ತಮಿಳುನಾಡು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಶ್ವವಿದ್ಯಾಲಯ(ಚೆನ್ನೈ)ಕ್ರಮವಾಗಿ ಗುಜರಾತ್ ಹಾಗೂ ತಮಿಳುನಾಡಿನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News