ಈ ವರ್ಷ 5ನೇ ಬಾರಿ ಫೈನಲ್ ತಲುಪಿದ ಪ್ಲಿಸ್ಕೋವಾ

Update: 2019-09-14 18:43 GMT

ಬೀಜಿಂಗ್, ಸೆ.14: ವಿಶ್ವದ ನಂ.2ನೇ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ಈ ವರ್ಷ ಐದನೇ ಬಾರಿ ಫೈನಲ್‌ಗೆ ತಲುಪಿದರು. ಡಬ್ಲುಟಿಎ ಝೆಂಗ್‌ಝೌ ಓಪನ್‌ನಲ್ಲಿ ಅಜ್ಲಾ ಟೊಮ್‌ಜಾನೊವಿಕ್‌ರನ್ನು 6-3, 6-2 ನೇರ ಸೆಟ್‌ಗಳಿಂದ ಮಣಿಸಿ ಈ ಸಾಧನೆ ಮಾಡಿದರು.

27ರ ಹರೆಯದ ಝೆಕ್ ಆಟಗಾರ್ತಿ ಶ್ರೇಯಾಂಕರಹಿತ ಕ್ರೊಯೇಶಿಯ ಆಟಗಾರ್ತಿ ಜಾನೊವಿಕ್‌ರನ್ನು ಮಣಿಸಿದರು. ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಪೆಟ್ರಾ ಮಾರ್ಟಿಕ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದು ಸೆಮಿ ಫೈನಲ್‌ನಲ್ಲಿ ಫ್ರಾನ್ಸ್‌ನ ಶ್ರೇಯಾಂಕರಹಿತ ಕ್ರಿಸ್ಟಿನಾ ಮ್ಲಾಡೆನೊವಿಕ್‌ರನ್ನು 6-0, 6-3 ಸೆಟ್‌ಗಳ ಅಂತರದಿಂದ ಸೋಲಿಸಿದ ಕ್ರೊಯೇಶಿಯದ ಮಾರ್ಟಿಕ್ ಫೈನಲ್ ತಲುಪಿದರು. 28ರ ಹರೆಯದ ಮಾರ್ಟಿಕ್ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದು, ಎಪ್ರಿಲ್‌ನಲ್ಲಿ ತನ್ನ ಮೊದಲ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News