'ಒಂದೇ ದೇಶ, ಒಂದೇ ಭಾಷೆ' ಹೇರಿಕೆ ಸರಿಯಲ್ಲ: ಜೈರಾಮ್ ರಮೇಶ್

Update: 2019-09-15 13:19 GMT

ಬೆಂಗಳೂರು, ಸೆ.15: ಒಂದೇ ದೇಶ, ಒಂದೇ ಭಾಷೆ ಎಂದುಕೊಂಡು ದಬ್ಬಾಳಿಕೆ ಮೂಲಕ ಹೇರಿಕೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ತಿಳಿಸಿದರು.

ರವಿವಾರ ನಗರದ ಕೆಜಿ ರಸ್ತೆಯ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ, ಸರ್.ಎಂ.ವಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ದೇಶ, ಒಂದೇ ತೆರಿಗೆ ಇರಬಹುದು. ಆದರೆ, ಒಂದು ದೇಶ ಒಂದೇ ಭಾಷೆ ಸಾಧ್ಯ ಆಗಲ್ಲ. ಒಂದು ದೇಶ ಹಲವು ಭಾಷೆ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಹಲವು ಸಂಪ್ರದಾಯ ಆಚರಣೆಗಳನ್ನು ಹೊಂದಿವೆ ಎಂದರು.

ಒಂದೇ ವೇದಿಕೆಯಲ್ಲಿ ರಾಜ್ಯಪಾಲರು ಹಿಂದಿ ಮಾತನಾಡಿದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕನ್ನಡ ಮಾತನಾಡಿದ್ದಾರೆ. ಇದುವೇ ಭಾರತೀಯ ನೈಜ ಸಂಸ್ಕೃತಿಯಾಗಿದ್ದು, ಇದನ್ನು ಬದಲಾಯಿಸುವುದು ಒಳ್ಳೆಯದಲ್ಲ ಎಂದು ನುಡಿದರು.

ಡಿಸಿಎಂ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ನಾವೆಲ್ಲಾ ಇಲ್ಲಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದೇವೆ.ಆದರೆ, ಕೆಲವರು ವಿಚಿತ್ರ ವ್ಯಕ್ತಿಗಳೂ ಇದ್ದು, ಈ ವ್ಯಕ್ತಿಗಳು ಉತ್ತಮ ರಸ್ತೆಗಳೇ ಅಪಘಾತಕ್ಕೆ ಕಾರಣ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News