ಜೆಎನ್‌ಯುಎಸ್‌ಯು ಫಲಿತಾಂಶ ಪ್ರಕಟಿಸಲು ದಿಲ್ಲಿ ಹೈಕೋರ್ಟ್ ಅನುಮತಿ

Update: 2019-09-17 14:54 GMT

ಹೊಸದಿಲ್ಲಿ, ಸೆ. 17: ಸೆಪ್ಟಂಬರ್ 6ರಂದು ನಡೆದ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣಾ ಫಲಿತಾಂಶ ಘೋಷಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಚುನಾವಣಾ ಸಮಿತಿಗೆ ಮಂಗಳವಾರ ಅನುಮತಿ ನೀಡಿದೆ. ಲಿಂಗ್ಡೋ ಸಮಿತಿ ಶಿಫಾರಸಿಗೆ ಅನುಗುಣವಾಗಿ ಚುನಾವಣಾ ಫಲಿತಾಂಶ ಘೋಷಿಸುವಂತೆ ಉಚ್ಚ ನ್ಯಾಯಾಲಯ ಜೆಎನ್‌ಯುಗೆ ಅನುಮತಿ ನೀಡಿತು.

ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟ (ಜೆಎನ್‌ಯುಎಸ್‌ಯು)ದ ಕೌನ್ಸಿಲರ್ ಚುನಾವಣೆಗೆ ಸಲ್ಲಿಸಲಾದ ತಮ್ಮ ನಾಮಪತ್ರವನ್ನು ಕಾನೂನುಬಾಹಿರವಾಗಿ ತಿರಸ್ಕರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಮನವಿಯನ್ನು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ವಿಲೇವಾರಿ ಮಾಡಿದರು. ಜೆಎನ್‌ಯು ವಿದ್ಯಾರ್ಥಿಗಳಾದ ಅಂಶುಮಾನ್ ದುಬೆ ಹಾಗೂ ಅಮಿತ್ ಕುಮಾರ್ ದ್ವಿವೇದಿ ಮನವಿ ಸಲ್ಲಿಸಿದ ಬಳಿಕ ಜೆಎನ್‌ಯುಎಸ್‌ಯು ಫಲಿತಾಂಶ ಘೋಷಣೆಗೆ ದಿಲ್ಲಿ ಉಚ್ಚ ನ್ಯಾಯಾಲಯ ತಡೆ ನೀಡಿತ್ತು. ವಿದ್ಯಾರ್ಥಿ ಸಂಘಟನೆಯ ವಿವಿಧ ಸ್ಥಾನಗಳಿಗೆ ಸೆಪ್ಟಂಬರ್ 6ರಂದು ನಡೆದ ಚುನಾವಣೆಯಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News