ಯೋಧಾ ವಿರುದ್ಧ ಮುಂಬಾಗೆ ರೋಚಕ ಜಯ

Update: 2019-09-18 18:34 GMT

ಪುಣೆ, ಸೆ.18: ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ನಡೆದ 95ನೇ ಪಂದ್ಯದಲ್ಲಿ ಯು.ಪಿ.ಯೋಧಾ ತಂಡವನ್ನು 39-36 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿತು.

ಮುಂಬಾ ಪರ ಅಭಿಷೇಕ್ ಸಿಂಗ್ 11 ಹಾಗೂ ಅರ್ಜುನ್ ದೇಶ್ವಾಲ್ 7 ಅಂಕ ಗಳಿಸಿದರು. ಯೋಧಾ ತಂಡದ ಪರ ಕನ್ನಡಿಗ ರಿಷಾಂಕ್ ದೇವಾಡಿಗ 9 ಹಾಗೂ ಶ್ರೀಕಾಂತ್ ಜಾಧವ್ 8 ಅಂಕ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

16ನೇ ಪಂದ್ಯದಲ್ಲಿ 8ನೇ ಜಯ ದಾಖಲಿಸಿದ ಮುಂಬಾ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. 16ರಲ್ಲಿ 6ನೇ ಸೋಲು ಕಂಡಿರುವ ಯೋಧಾ ಆರನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News