ವಿರಾಟ್ ಕೊಹ್ಲಿ ಸಾಧನೆಗೆ ‘ಬೇಷ್’ ಎಂದ ಶಾಹಿದ್ ಅಫ್ರಿದಿ

Update: 2019-09-19 07:22 GMT

ಹೊಸದಿಲ್ಲಿ, ಸೆ.19: ಭಾರತದ ನಾಯಕ ವಿರಾಟ್ ಕೊಹ್ಲಿ ಬುಧವಾರ ರಾತ್ರಿ ಮೊಹಾಲಿಯಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಔಟಾಗದೆ 72 ರನ್ ಗಳಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದರು. ಈ ವೇಳೆ ಅವರು ಹಲವು ಮೈಲುಗಲ್ಲುಗಳನ್ನು ತಲುಪಿದರು. 2,441ರನ್ ಗಳಿಸಿ ಟಿ-20 ಕ್ರಿಕೆಟ್‌ನ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದ ಅವರು ಚುಟುಕು ಮಾದರಿ ಕ್ರಿಕೆಟ್‌ನಲ್ಲಿ 22ನೇ ಅರ್ಧಶತಕವನ್ನು ಪೂರೈಸಿದರು.
30ರ ಹರೆಯದ ಕೊಹ್ಲಿ ಎಲ್ಲ ಮೂರು ಮಾದರಿ ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿ ದಾಖಲಿಸಿದ್ದಾರೆ. ಈ ಸಾಧನೆಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಕೊಹ್ಲಿ ಅವರನ್ನು ಪ್ರಶಂಸಿಸಿದ್ದು, ಕೊಹ್ಲಿ ಓರ್ವ ಶ್ರೇಷ್ಠ ಅಟಗಾರ ಎಂದು ಬಣ್ಣಿಸಿದ್ದಾರೆ.
ಐಸಿಸಿ ಪೋಸ್ಟ್‌ನೊಂದಿಗೆ ರೀ ಟ್ವೀಟ್ ಮಾಡಿದ ಅಫ್ರಿದಿ,‘‘ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ನಿಜವಾಗಿಯೂ ನೀವು ಶ್ರೇಷ್ಠ ಆಟಗಾರ. ಇದೇ ಯಶಸ್ಸನ್ನು ಮುಂದುವರಿಸಿ ಎಂದು ಆಶಿಸುವೆ. ಈ ಮೂಲಕ ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುವುದನ್ನು ಮುಂದುವರಿಸಿ’’ ಎಂದು ಬರೆದಿದ್ದರು.
 ವಿರಾಟ್ ಕೊಹ್ಲಿಯವರ ಸಾಧನೆಯನ್ನು ಕೊಂಡಾಡಿದ ಐಸಿಸಿ,

ಟೆಸ್ಟ್: 53.14, ಏಕದಿನ: 60.31, ಟ್ವೆಂಟಿ-20: 50.85.

ವಿರಾಟ್ ಕೊಹ್ಲಿ ಮತ್ತೊಮ್ಮೆ ಎಲ್ಲ ಮೂರು ಮಾದರಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿ ದಾಖಲಿಸಿದ್ದಾರೆ’’ ಎಂದು ಟ್ವೀಟ್ ಮಾಡಿತ್ತು.


ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ್ದ ಸಹ ಆಟಗಾರ ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿರುವ ಕೊಹ್ಲಿ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿ ದಾಖಲಿಸಿರುವ ಏಕೈಕ ಸಮಕಾಲೀನ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News