ಬೆಲ್ಜಿಯಂ ಪ್ರವಾಸಕ್ಕೆ ಭಾರತದ ಪುರುಷರ ಹಾಕಿ ತಂಡ ಪ್ರಕಟ

Update: 2019-09-20 19:01 GMT

ಹೊಸದಿಲ್ಲಿ, ಸೆ.20: ಬೆಲ್ಜಿಯಂ ಪ್ರವಾಸಕ್ಕೆ ಮನ್‌ಪ್ರೀತ್ ಸಿಂಗ್ ನೇತೃತ್ವದ 20 ಆಟಗಾರರನ್ನು ಒಳಗೊಂಡ ಭಾರತದ ಪುರುಷರ ಹಾಕಿ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಫಾರ್ವರ್ಡ್ ಆಟಗಾರ ಲಲಿತ್ ಉಪಾಧ್ಯಾಯ ಹಾಗೂ ಡ್ರಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ತಂಡಕ್ಕೆ ವಾಪಸಾಗಿದ್ದಾರೆ.

 ಭಾರತದ ಬೆಲ್ಜಿಯಂ ಹಾಕಿ ಪ್ರವಾಸ ಸೆ.26ರಿಂದ ಅಕ್ಟೋಬರ್ 3ರ ತನಕ ನಡೆಯಲಿದೆ.

ಭಾರತ ವಾರ ಪೂರ್ತಿ ನಡೆಯಲಿರುವ ಹಾಕಿ ಪ್ರವಾಸದ ವೇಳೆ ಬೆಲ್ಜಿಯಂ ವಿರುದ್ಧ 3 ಪಂದ್ಯಗಳನ್ನು ಹಾಗೂ ಸ್ಪೇನ್ ವಿರುದ್ಧ 2 ಪಂದ್ಯಗಳನ್ನು ಆಡಲಿದೆ.

ಭುವನೇಶ್ವರದಲ್ಲಿ ನಡೆದ ಪುರುಷರ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಆಡಿರುವ ಲಲಿತ್ ಉಪಾಧ್ಯಾಯ ತಂಡಕ್ಕೆ ವಾಪಸಾಗಿದ್ದಾರೆ. ರೂಪಿಂದರ್ ಈ ವರ್ಷಾರಂಭದಲ್ಲಿ ನಡೆದಿದ್ದ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಿಂದ ಹೊರಗುಳಿದಿದ್ದರು. ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಿಂದ ವಿಶ್ರಾಂತಿ ಪಡೆದಿದ್ದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ತಂಡವನ್ನು ಸೇರಿಕೊಂಡಿದ್ದಾರೆ. ಕೃಷ್ಣ ಪಾಠಕ್ ಇನ್ನೋರ್ವ ಗೋಲ್‌ಕೀಪರ್ ಆಗಿದ್ದಾರೆ.

 ‘‘ಬೆಲ್ಜಿಯಂ ಬಲಿಷ್ಠ ತಂಡ. ನಾವು ಅದರದೇ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರಶ್ಯದ ವಿರುದ್ಧ ಒಲಿಂಪಿಕ್ಸ್ ಕ್ವಾಲಿಫೈಯರ್ ಪಂದ್ಯಕ್ಕಿಂತ ಮೊದಲು ಹೆಚ್ಚಿನ ಆತ್ಮವಿಶ್ವಾಸವನ್ನು ಪಡೆದುಕೊಳ್ಳಬಹುದು. ಸ್ಪೇನ್ ತಂಡದಿಂದಲೂ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಲ್ಲಿ ದ್ದೇವೆ’’ ಕೋಚ್ ಗ್ರಹಾಂ ರೆಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News