ಅಮೆರಿಕ- ಭಾರತ ನಡುವೆ ನ್ಯಾಟೊ ಮಾದರಿ ರಕ್ಷಣಾ ಸಂಬಂಧ ಪ್ರತಿಪಾದನೆ: ಅಮೆರಿಕನ್ ಸಂಸದ ಆರ್.ಓ.ಖನ್ನಾ

Update: 2019-09-21 04:27 GMT
ಆರ್.ಓ.ಖನ್ನಾ

ವಾಷಿಂಗ್ಟನ್, ಸೆ.21: ಭಾರತ ಹಾಗೂ ಅಮೆರಿಕ ನಡುವೆ ನ್ಯಾಟೊಗೆ ಸಮಾನವಾದ ದ್ವಿಪಕ್ಷೀಯ ರಕ್ಷಣಾ ಒಪ್ಪಂದ ಏರ್ಪಡಬೇಕು ಎಂದು ಭಾರತ ಮೂಲದ ಅಮೆರಿಕನ್ ಸಂಸದ ಆರ್.ಓ.ಖನ್ನಾ ಪ್ರತಿಪಾದಿಸಿದ್ದಾರೆ.

ಇಂಥ ಸ್ಥಾನಮಾನ ಭಾರತ- ಅಮೆರಿಕ ನಡುವಿನ ಸಂಬಂಧವನ್ನು ಮುಂದಿನ ಹಂತಕ್ಕೆ ಒಯ್ಯಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉಭಯ ದೇಶಗಳ ನಡುವಿನ ಸಂಭಂಧವನ್ನು ಬಲಪಡಿಸುವ ಬಗ್ಗೆ ಚಿಂತನೆ ನಡೆಸಿರುವ ಪೆಂಟಗಾನ್‌ನ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಖನ್ನಾ ಈ ಹೇಳಿಕೆ ನೀಡಿದ್ದಾರೆ.

"ನಮ್ಮ ರಕ್ಷಣಾ ಸಂಬಂಧಕ್ಕೆ ನ್ಯಾಟೊಗೆ ಸಮಾನವಾದ ಸ್ಥಾನಮಾನ ನೀಡುವ ವಿಚಾರದಲ್ಲಿ ವಿದೇಶಿ ಸಂಬಂಧಗಳ ಸಮಿತಿಯ ಅಧ್ಯಕ್ಷ ಎಲಿಯಟ್ ಏಜೆಂಲ್ ಅವರ ಜತೆ ಚರ್ಚಿಸುತ್ತಿದ್ದೇನೆ. ಸಶಸ್ತ್ರ ಸೇವೆಗಳ ಸಮಿತಿಯಲ್ಲಿ ಈ ಸಂಬಂಧ ಮಸೂದೆ ಮಂಡಿಸಿದ್ದೇನೆ. ಇದು ಆಂಗೀಕಾರವಾಗುವ ಸಲುವಾಗಿ ಮೈತ್ರಿ ಹೆಣೆಯುತ್ತಿದ್ದೇನೆ" ಎಂದು ಅವರು ವಿವರಿಸಿದ್ದಾರೆ.

ಇಂಡೋ ಪೆಸಿಫಿಕ್ ಭದ್ರತಾ ವ್ಯವಹಾರಗಳ ಸಹಾಯಕ ರಕ್ಷಣಾ ಕಾರ್ಯದರ್ಶಿ ರ್ಯಾಂಡಿ ಶ್ರಿವರ್ ಜತೆಗಿನ ಚರ್ಚೆಯಲ್ಲಿ ಖನ್ನಾ ಉಭಯ ದೇಶಗಳ ನಡುವೆ ಪ್ರಬಲ ರಕ್ಷಣಾ ಒಪ್ಪಂದದ ಅಗತ್ಯತೆಯನ್ನು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News