ತಾಂತ್ರಿಕ ದೋಷ: ಇಮ್ರಾನ್‍ಖಾನ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

Update: 2019-09-28 08:09 GMT
File Photo (Reuters)

ನ್ಯೂಯಾರ್ಕ್: ಅಮೆರಿಕ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್‍ಖಾನ್ ಹಾಗೂ ಅವರ ನಿಯೋಗ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ವಾಪಾಸ್ ನ್ಯೂಯಾರ್ಕ್‍ಗೆ ಕಳುಹಿಸಿದ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ನ್ಯೂಯಾರ್ಕ್‍ನಿಂದ ಹೊರಟ ನಾಲ್ಕು ಗಂಟೆಗಳ ಬಳಿಕ ವಿಮಾನ ಮಾರ್ಗಮಧ್ಯದಲ್ಲಿದ್ದಾಗ ಸಿಬ್ಬಂದಿ ತಾಂತ್ರಿಕ ದೋಷವನ್ನು ಪತ್ತೆ ಮಾಡಿದರು. ವಿಮಾನದ ಎಲೆಕ್ಟ್ರಾನಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡದ್ದು ಇದಕ್ಕೆ ಕಾರಣ ಎಂದು ಸಮಾ ಟಿವಿ ವರದಿ ಮಾಡಿದೆ.

ವಿಮಾನದ ತಾಂತ್ರಿಕ ದೋಷದ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಇದು ಗಂಭೀರ ದೋಷವಾಗರಬೇಕು. ಆದ್ದರಿಂದ ಕೆನಡಾದ ಟೊರಂಟೊ ಸಮೀಪ ವಿಮಾನವನ್ನು ವಾಪಾಸು ಕಳುಹಿಸಲಾಯಿತು. ಬಳಿಕ ನ್ಯೂಯಾರ್ಕ್‍ನ ಜಾನ್ ಎಫ್.ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎನ್ನಲಾಗಿದೆ.

ಒಂದು ವಾರದ ಅಮೆರಿಕ ಪ್ರವಾಸ ಮುಗಿಸಿ ಇಮ್ರಾನ್ ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News