ಇರಾನನ್ನು ತಡೆಯದಿದ್ದರೆ ತೈಲ ಬೆಲೆ ಊಹೆಗೂ ನಿಲುಕದಷ್ಟು ಎತ್ತರಕ್ಕೇರಬಹುದು: ಸೌದಿ ಯುವರಾಜ

Update: 2019-09-30 14:13 GMT

ವಾಶಿಂಗ್ಟನ್, ಸೆ. 30: ಇರಾನನ್ನು ತಡೆಯಲು ಜಗತ್ತು ಒಂದಾಗದಿದ್ದರೆ, ತೈಲ ಬೆಲೆಯು ‘ಊಹೆಗೂ ನಿಲುಕದಷ್ಟು ಎತ್ತರ’ಕ್ಕೆ ತಲುಪಬಹುದು ಎಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಎಚ್ಚರಿಸಿದ್ದಾರೆ. ಆದರೆ, ಈ ವಿಷಯದಲ್ಲಿ ನಾನು ಸೇನಾ ಪರಿಹಾರಕ್ಕಿಂತಲೂ ರಾಜಕೀಯ ಪರಿಹಾರಕ್ಕೆ ಆದ್ಯತೆ ನೀಡುತ್ತೇನೆ ಎಂದು ಅವರು ಹೇಳಿದರು.

ಸಿಬಿಎಸ್ ಸುದ್ದಿವಾಹಿನಿಯ ‘60 ಮಿನಿಟ್ಸ್’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಸಂದರ್ಶನವು ರವಿವಾರ ಪ್ರಸಾರಗೊಂಡಿದೆ.

‘‘ಇರಾನನ್ನು ತಡೆಯಲು ಜಗತ್ತು ಪ್ರಬಲ ಹಾಗೂ ದೃಢ ಕ್ರಮವೊಂದನ್ನು ತೆಗೆದುಕೊಳ್ಳಲು ವಿಫಲವಾದರೆ, ಆ ವಲಯದ ಉದ್ವಿಗ್ನತೆ ಇನ್ನಷ್ಟು ಹೆಚ್ಚುವುದನ್ನು ನಾವು ನೋಡಲಿದ್ದೇವೆ ಹಾಗೂ ಇದು ಜಾಗತಿಕ ಹಿತಾಸಕ್ತಿಗಳಿಗೆ ಬೆದರಿಕೆಯಾಗಿರುತ್ತದೆ’’ ಎಂದು ಸೌದಿ ಯುವರಾಜ ಹೇಳಿದರು.

‘‘ತೈಲ ಪೂರೈಕೆ ಅಸ್ತವ್ಯಸ್ತಗೊಳ್ಳುತ್ತದೆ ಹಾಗೂ ತೈಲ ಬೆಲೆಗಳು ನಾವು ನಮ್ಮ ಜೀವಮಾನದಲ್ಲಿ ಕಾಣದಷ್ಟು ಎತ್ತರಕ್ಕೆ ಜಿಗಿಯುತ್ತವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News