ರಸ್ತೆ ಅಪಘಾತಕ್ಕೆ ಮಹಿಳೆ ಬಲಿ

Update: 2019-10-02 14:14 GMT

ಬೆಂಗಳೂರು, ಅ.2: ಟೆಂಪೋ ಟ್ರಾವೆಲರ್‌ಗೆ ಹಿಂದಿನಿಂದ ವೇಗವಾಗಿ ಬಂದ ಆಟೊ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಾಕೆ ಮೃತಪಟ್ಟಿರುವ ಘಟನೆ ಇಲ್ಲಿನ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಮಹಾಲಕ್ಷ್ಮೀಪುರ ನಿವಾಸಿ ರಮಾ ಸಾವಂತ್ (47) ಎಂಬಾಕೆ ಮೃತಪಟ್ಟಿದ್ದು, ಇವರ ಪುತ್ರಿ ಸುಶ್ಮಿತಾ ಎಂಬುವರು ಗಾಯಗೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಲಬುರಗಿ ಮೂಲದ ರಮಾ ಸಾವಂತ್ ಅವರು, ಪುತ್ರಿ ಸುಶ್ಮಿತಾ ಜೊತೆ ಕೆಲಸದ ನಿಮಿತ್ತ ಹೋಗಿ, ಮಂಗಳವಾರ ಸಂಜೆ ಇಲ್ಲಿನ ಮಹಾಲಕ್ಷ್ಮೀಪುರದ ಮೆಟ್ರೋ ನಿಲ್ದಾಣದಲ್ಲಿಳಿದು, ಆಟೊದಲ್ಲಿ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ.

ಮಾರ್ಗಮಧ್ಯೆ ಸರಸ್ವತಿಪುರ ಮುಖ್ಯರಸ್ತೆಯ ಇಳಿಜಾರಿನಲ್ಲಿ ಮುಂದೆ ತಿರುವಿನಲ್ಲಿ ಬರುತ್ತಿದ್ದ ಟೆಂಪೋ ಟ್ರಾವೆಲರ್‌ಗೆ ಆಟೋ ಢಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ರಮಾ ಸಾವಂತ್ ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ರಾಜಾಜಿನಗರ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News