ಬೆನ್ ಸ್ಟೋಕ್ಸ್ ಗೆ ಪಿಸಿಎ ವರ್ಷದ ಆಟಗಾರ ಪ್ರಶಸ್ತಿ

Update: 2019-10-04 04:29 GMT

ಲಂಡನ್, ಅ.3: ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ವೃತ್ತಿಪರ ಕ್ರಿಕೆಟಿಗರ ಅಸೋಸಿಯೇಶನ್ ಅವಾರ್ಡ್ಸ್‌ನಲ್ಲಿ ಆಟಗಾರರ ‘ವರ್ಷದ ಆಟಗಾರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಸ್ಟೋಕ್ಸ್ ಇಂಗ್ಲೆಂಡ್ ತಂಡ ಮೊದಲ ಬಾರಿ 50 ಓವರ್‌ಗಳ ವಿಶ್ವಕಪ್ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜುಲೈನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

28ರ ಹರೆಯದ ಸ್ಟೋಕ್ಸ್ ಆಸ್ಟ್ರೇಲಿಯ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಔಟಾಗದೆ 135 ರನ್ ಗಳಿಸಿ ಮತ್ತೊಮ್ಮೆ ವೀರೋಚಿತ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ಆ್ಯಶಸ್ ಸರಣಿಯನ್ನು ಡ್ರಾಗೊಳಿಸಿದ್ದರೂ ಆಸ್ಟ್ರೇಲಿಯ ತಂಡ ಆ್ಯಶಸ್ ಕಪ್‌ನ್ನು ತನ್ನಲ್ಲೇ ಉಳಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News