ಹಾಂಕಾಂಗ್‌ನಲ್ಲಿ ತುರ್ತು ಪರಿಸ್ಥಿತಿ ಜಾರಿ

Update: 2019-10-04 17:54 GMT

ಹಾಂಕಾಂಗ್, ಅ. 4: ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಪರ ಪ್ರತಿಭಟನೆ ನಡೆಸುತ್ತಿರುವವರು ಮುಖ ಕವಚಗಳನ್ನು ಹಾಕಿಕೊಳ್ಳುವುದನ್ನು ನಿಷೇಧಿಸುವುದಕ್ಕಾಗಿ ನಗರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್ ಶುಕ್ರವಾರ ವಸಾಹತುಶಾಹಿ ಯುಗದ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದಾರೆ.

 ಆದರೆ, ತಿಂಗಳುಗಳ ಕಾಲದ ಅಶಾಂತಿಯನ್ನು ದಮನಿಸಲು ಜಾರಿಗೆ ತರಲಾದ ಈ ಕ್ರಮದ ವಿರುದ್ಧ ಜನರು ಸಿಡಿದೆದ್ದಿದ್ದು, ತಕ್ಷಣ ಹೊಸ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ್ದಾರೆ. ನೂತನ ಕಾನೂನನ್ನು ಉಲ್ಲಂಘಿಸುವುದಾಗಿ ಅವರು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News