ಕಸ್ಟನ್‌ರ್ ಅವರ 23 ವರ್ಷ ಹಳೆಯ ದಾಖಲೆ ಮುರಿದ ಎಲ್ಗರ್

Update: 2019-10-05 02:18 GMT

ವಿಶಾಖಪಟ್ಟಣ, ಅ.4: ಡಿಯನ್ ಎಲ್ಗರ್ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 150 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಎಡಗೈ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು. 32ರ ಹರೆಯದ ಎಲ್ಗರ್ ಆರಂಭಿಕ ದಾಂಡಿಗನಾಗಿ 160 ರನ್ ಗಳಿಸುವ ಮೂಲಕ 1996ರಲ್ಲಿ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ 133 ರನ್ ಗಳಿಸಿದ್ದ ಗ್ಯಾರಿ ಕರ್ಸ್ಟನ್ ದಾಖಲೆಯನ್ನು ಮುರಿದರು. ಎಲ್ಗರ್ ಭಾರತ ವಿರುದ್ಧ ಶತಕ ಗಳಿಸಿದ ದ.ಆಫ್ರಿಕಾದ ಐದನೇ ಎಡಗೈ ಬ್ಯಾಟ್ಸ್‌ಮನ್. ಎಲ್ಗರ್ 160 ರನ್ ಗಳಿಸುವುದರೊಂದಿಗೆ ಒಂದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂವರು ಆರಂಭಿಕ ಆಟಗಾರರು 150 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದಂತಾಗಿದೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿನ ನಾಲ್ಕನೇ ದೃಷ್ಟಾಂತವಾಗಿದೆ. ರೋಹಿತ್ ಶರ್ಮಾ 176 ಹಾಗೂ ಮಾಯಾಂಕ್ ಅಗರ್ವಾಲ್ 215 ರನ್ ಗಳಿಸಿದ್ದಾರೆ. ಕೊನೆಯ ಬಾರಿ ಭಾರತದಲ್ಲಿ 150ಕ್ಕೂ ಅಧಿಕ ರನ್ ಗಳಿಸಿದ ಪ್ರವಾಸಿ ತಂಡದ ಆರಂಭಿಕ ದಾಂಡಿಗನೆಂದರೆ ಅಲಸ್ಟೈರ್ ಕುಕ್. 2012ರಲ್ಲಿ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಕುಕ್ ಈ ಸಾಧನೆ ಮಾಡಿದ್ದರು. ಕುಸಿತದ ಹಾದಿಯಲ್ಲಿದ್ದ ಹರಿಣ ಪಡೆಯನ್ನು ಆಧರಿಸಿದ ಎಲ್ಗರ್ 2 ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಎಲ್ಗರ್ ಟೆಸ್ಟ್‌ನಲ್ಲಿ 2ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಗಳಿಸಿದ 8ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಇದಾಗಿದೆ. ಎಡಗೈ ದಾಂಡಿಗ ಎಲ್ಗರ್ ಸ್ಪಿನ್ನರ್ ರವೀಂದ್ರ ಜಡೇಜಗೆ 200 ವಿಕೆಟ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News