ಭಾರತ-ದ.ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್‌ಗಳ ವಿಶ್ವ ದಾಖಲೆ ಪತನ

Update: 2019-10-06 09:48 GMT

ವಿಶಾಖಪಟ್ಟಣ, ಅ.6: ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್‌ಗಳ ವಿಶ್ವ ದಾಖಲೆಯು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ರವಿವಾರ ನಡೆದ ಮೊದಲ ಟೆಸ್ಟ್‌ನ ಕೊನೆಯ ದಿನದಾಟದಲ್ಲಿ ಪತನವಾಯಿತು.

ಡೇನ್ ಪೀಟ್ ದಕ್ಷಿಣ ಆಫ್ರಿಕಾದ ಎರಡನೇ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜ ಎಸೆದ 36ನೇ ಓವರ್‌ನಲ್ಲಿ 36ನೇ ಸಿಕ್ಸರ್ ದಾಖಲಿಸಿದರು. ಈ ಹಿಂದೆ 2014ರಲ್ಲಿ ಶಾರ್ಜಾದಲ್ಲಿ ನ್ಯೂಝಿಲ್ಯಾಂಡ್ ಹಾಗೂ ಪಾಕಿಸ್ತಾನ ಮಧ್ಯ ನಡೆದಿದ್ದ ಪಂದ್ಯದಲ್ಲಿ 35 ಸಿಕ್ಸರ್‌ಗಳು ದಾಖಲಾಗಿದ್ದವು.

ವೈಯಕ್ತಿಕವಾಗಿ ರೋಹಿತ್ ಶರ್ಮಾ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು(13)ದಾಖಲಿಸಿದರು.

ಭಾರತ ಮೊದಲ ಇನಿಂಗ್ಸ್‌ನಲ್ಲಿ 13 ಸಿಕ್ಸರ್ ಸಿಡಿಸಿದರೆ, ಇದಕ್ಕೆ ಪ್ರತಿಯಾಗಿ ದ.ಆಫ್ರಿಕಾ 7 ಸಿಕ್ಸರ್‌ಗಳನ್ನು ಸಿಡಿಸಿತು. ಭಾರತ 2ನೇ ಇನಿಂಗ್ಸ್‌ನಲ್ಲಿ 14 ಸಿಕ್ಸರ್‌ಗಳನ್ನು ಸಿಡಿಸಿತು. ದ.ಆಫ್ರಿಕಾ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 3 ಸಿಕ್ಸರ್‌ಗಳನ್ನು ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News