ಪವಿತ್ರ ಆರ್ಥಿಕತೆಗೆ ಶೂನ್ಯ ತೆರಿಗೆಗೆ ಆಗ್ರಹ: ರಂಗಕರ್ಮಿ ಪ್ರಸನ್ನರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

Update: 2019-10-06 14:23 GMT

ಬೆಂಗಳೂರು, ಅ.6: ಕೈ ಕಸುಬು ಉತ್ಪನ್ನಗಳಿಗೆ(ಪವಿತ್ರ ಆರ್ಥಿಕ ಕ್ಷೇತ್ರ) ಶೂನ್ಯ ತೆರಿಗೆ ವಿಧಿಸುವಂತೆ ಹಾಗೂ ಈ ಉತ್ಪನ್ನಗಳಿಗೆ ಸುಧಾರಣೆಗಳನ್ನು ತರಬೇಕೆಂದು ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಇಂದಿನಿಂದ(ಅ.6) ಸಂಪೂರ್ಣ ನಿರಾಹಾರದ ಉಪವಾಸ ಸತ್ಯಾಗ್ರಹವನ್ನು ಅನಿರ್ದಿಷ್ಟಾವಧಿಯವರೆಗೂ ಆರಂಭಿಸಿದ್ದಾರೆ.

ಹತ್ತು ದಿನಗಳಿಂದ ಪವಿತ್ರ ಆರ್ಥಿಕತೆಯ ಸಾಧನೆಗಾಗಿ ಹಲವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾಗೂ ಅ.2ರಿಂದ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗಿತ್ತು. ಈಗ ಹಿರಿಯ ರಂಗಕರ್ಮಿ ಪ್ರಸನ್ನ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರತಿದಿನ, ಮೂರು ಲಕ್ಷ ಭಾರತೀಯ ಪ್ರಜೆಗಳು ಕೆಲಸ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಅವರಿಗೆ ಒಳಿತಾಗಲಿ, ಪವಿತ್ರ ಆರ್ಥಿಕತೆಯು ರಾಕ್ಷಸ ಆರ್ಥಿಕತೆಯನ್ನು ಮಣಿಸಲಿ ಎಂಬುದೇ ನಮ್ಮ ಆಶಯವಾಗಿದೆ ಎಂದು ಅನಿರ್ದಿಷ್ಟ ಉಪವಾಸ ನಿರತ ಪ್ರಸನ್ನ ಹೇಳಿದ್ದಾರೆ.

ಐದನೆಯ ದಿನದ ಸತ್ಯಾಗ್ರಹದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜಪ್ಪ, ಕಾರ್ಮಿಕ ಸಂಘಟನೆಯ ಮುಖಂಡರಾದ ಟಿ.ಆರ್. ಅನಂತರಾಮು, ಆರ್ಥಿಕತಜ್ಞ ವಿನೋದ ವ್ಯಾಸುಲು, ಗ್ರಾಮ ಸೇವಾ ಸಂಘದ ಮಾರ್ಗದರ್ಶಕರಾದ ಜಿ.ಶಿವರಾಮ ಕೃಷ್ಣನ್, ವೆಂಕಟನಾಥನ್ ಹಾಗೂ ಇನ್ನೂ ಹಲವಾರು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.

ಬೇಡಿಕೆಗಳು:

-ಹಸಿರನ್ನು ಹಸಿರಾಗಿಯೇ ಉಳಿಸಬಲ್ಲ ಕೆಲಸಕ್ಕೆ ಆದ್ಯತೆ

-ಗ್ರಾಮಗಳನ್ನು ನಾಶಮಾಡದಿರುವಂತಹ ಕೆಲಸ ಆಗಬೇಕು.

-ಭೂಮಿ ಬಿಸಿಯಾಗದಿರುವಂತೆ ಎಚ್ಚರಿಕೆ ವಹಿಸಬೇಕು.

-ನೆಲ ಜಲ ಜೀವ ತಂತುಗಳಿಗೆ ಸಮಸ್ಯೆಯಾಗಂತ ರೀತಿಯಲ್ಲಿ ಅಭಿವೃದ್ಧಿಯಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News