ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ

Update: 2019-10-07 10:21 GMT

ಬೆಂಗಳೂರು, ಅ. 7: ಉದ್ಯಾನನಗರಿ ಬೆಂಗಳೂರು, ಅರಮ ನೆನಗರಿ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತನ್ನ ನಿವಾಸದಲ್ಲೂ ಹಬ್ಬದ ಹಿನ್ನೆಲೆಯಲ್ಲಿ ಪೂಜಾ ಕಂಕೈರ್ಯ ನೆರವೇರಿಸಿದರು

ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿ ಸಿಎಂ ಬಿಎಸ್‌ವೈ ನಿವಾಸ ಧವಳಗಿರಿಯಲ್ಲಿ ಸೋಮವಾರ ಆಯುಧ ಪೂಜೆ ನೆರವೇರಿಸಲಾಯಿತು. ವಾಹನ ಗಳಿಗೆ ವಿಶೇಷವಾಗಿ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿ ಚಾಲಕರು ಮತ್ತು ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ನಾಡಿನ ಜನತೆಗೆ ಶುಭ ಹಾರೈಕೆ: ‘ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ನಾಡ ಹಬ್ಬ ವಿಜಯದಶಮಿಯಾಗಿದೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಶುಭ ಕೋರಿದ್ದಾರೆ.

ಸನ್ಮಂಗಳವನ್ನುಂಟು ಮಾಡಲಿ: ‘ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ನಾಡಹಬ್ಬ ವಿಜಯದಶಮಿಯಾಗಿದೆ. ನಾಡಿನ ಸಮಸ್ತ ಜನತೆಗೆ ಸನ್ಮಂಗಳನ್ನುಂಟು ಮಾಡಲಿ. ಸಮಸ್ತ ಜನತೆಯ ಕಲ್ಯಾಣ ಹಾಗೂ ರಾಜ್ಯದ ಮತ್ತಷ್ಟು ಅಭಿವೃದ್ಧಿಗೆ ತಾಯಿ ಚಾಮುಂಡೇಶ್ವರಿ ಆಶಿರ್ವಾದವನ್ನು ದಯಪಾಲಿಸಲಿ’ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಶುಭಾ ಹಾರೈಸಿದ್ದಾರೆ.

ಸಂಕಷ್ಟ ದೂರವಾಗಲಿ: ‘ನಾಡಿನ ಸರ್ವರಿಗೂ ಆಯುಧ ಪೂಜೆ ಹಾಗೂ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು. ನಾಡದೇವತೆ ಚಾಮುಂಡೇಶ್ವರಿ ತಾಯಿ ಸಮಸ್ತರಿಗೂ ಆರೋಗ್ಯ, ಆಯಸ್ಸು, ನೆಮ್ಮದಿ ಕರುಣಿಸಲಿ ಹಾಗೂ ರೈತರ ಎಲ್ಲ ರೀತಿಯ ಸಂಕಷ್ಟಗಳು ದೂರವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಪ್ರಾರ್ಥಿಸಿದ್ದಾರೆ.

‘ಸಮಸ್ತರಿಗೂ ಆಯುಧ ಪೂಜೆ ಹಾಗೂ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ನಾಡು ಸಮೃದ್ದಿಯತ್ತ ಸಾಗಲಿ. ತಾಯಿ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’
-ಎಚ್.ಡಿ.ದೇವೇಗೌ ಮಾಜಿ ಪ್ರಧಾನಿ

‘ಸಂಭ್ರಮದ ಮಹಾನವಮಿ ಹಬ್ಬವು ನಾಡಿನ ಸಮಸ್ತ ಜನರ ಬಾಳಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿಯನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. ಸರ್ವರಿಗೂ ಮಹಾನವಮಿಯ ಶುಭಾಶಯಗಳು’

-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News