ಪನಾಮ ಪೇಪರ್ಸ್‌ನಲ್ಲಿ ತೆರಿಗೆ ವಂಚಕರ ಹೆಸರನ್ನು ತನಿಖಾ ಸಂಸ್ಥೆ ಗೌಪ್ಯವಾಗಿಡಬಹುದು: ಸಿಐಸಿ

Update: 2019-10-08 14:53 GMT

ಹೊಸದಿಲ್ಲಿ.ಅ8: ಪನಾಮ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಯಲಾಗಿರುವ ತೆರಿಗೆ ವಂಚಕರ ಹೆಸರನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸದೆ ಗೌಪ್ಯವಾಗಿಡಬಹುದು ಎಂದು ಕೇಂದ್ರ ಮಾಹಿತಿ ಆಯೋಗ ತಿಳಿಸಿದೆ. ತನ್ನ ಮಾಹಿತಿ ಹಕ್ಕು ಅರ್ಜಿಗೆ ಸಮಾಧಾನಕರ ಉತ್ತರ ಪಡೆಯದ ದುರ್ಗಾಪ್ರಸಾದ್ ಚೌದರಿ ಎಂಬವರ ಮನವಿಯ ವಿಚಾರಣೆ ನಡೆಸಿದ ಆಯೋಗ ಈ ಹೇಳಿಕೆ ನೀಡಿದೆ.

ಪನಾಮ ಪೇಪರ್ಸ್‌ನಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳ ಪಟ್ಟಿ, ಸೋರಿಕೆ ಬಗ್ಗೆ ತೆಗೆದುಕೊಂಡ ಕ್ರಮ ಮತ್ತು ತನಿಖೆ ವಿಳಂಬವಾಗಲು ಕಾರಣರಾದ ಅಧಿಕಾರಿಗಳ ವಿವರ ಕೋರಿ ಚೌಧರಿ 2017ರಲ್ಲಿ ಮಾಹಿತಿ ಕೇಳಿದ್ದರು. ತೆರಿಗೆವಂಚಕರ ಹೆಸರನ್ನು ಘೋಷಿಸುವುದರಿಂದ 24(1) ವಿಧಿಯಡಿ ವಿನಾಯಿತಿ ನೀಡಲು ಆರ್‌ಟಿಐ ಅರ್ಜಿಗಳನ್ನು ನಿರ್ಧರಿಸುವ ಅತ್ಯುನ್ನತ ಸಂಸ್ಥೆ ಸಿಐಸಿಯಲ್ಲಿ ಈ.ಡಿ ಮನವಿ ಮಾಡಿತ್ತು.

ಇದು ಉನ್ನತ ವರ್ಗದಲ್ಲಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದ್ದು ಈ ಕುರಿತು ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಚೌಧರಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News