ಅಜ್ಮನ್‌: ಅತೀದೊಡ್ಡ ಖಾಸಗಿ ಶೈಕ್ಷಣಿಕ ಆಸ್ಪತ್ರೆ ನಿರ್ಮಿಸಿದ 'ತುಂಬೆ ಗ್ರೂಪ್'

Update: 2019-10-08 15:54 GMT

ಅಜ್ಮನ್ : ಅಜ್ಮನ್‌ನ ಅತೀ ದೊಡ್ಡ ಶೈಕ್ಷಣಿಕ ಆಸ್ಪತ್ರೆ 'ತುಂಬೆ ಯುನಿವರ್ಸಿಟಿ ಆಸ್ಪತ್ರೆ'ಯನ್ನು ತುಂಬೆ ಗ್ರೂಪ್‌ನ ತುಂಬೆ ಮೆಡಿಸಿಟಿಯಲ್ಲಿ ಸೋಮವಾರ ಉದ್ಘಾಟಿಸಲಾಯಿತು.

ಮೊದಲ ಹಂತದಲ್ಲಿ 350 ಹಾಸಿಗೆಗಳನ್ನು ಹೊಂದಿರುವ ಈ ಆಸ್ಪತ್ರೆ ಅಜ್ಮನ್‌ನ ಅತೀದೊಡ್ಡ ಖಾಸಗಿ ಶೈಕ್ಷಣಿಕ ಆಸ್ಪತ್ರೆಯಾಗಿದೆ. ಸೋಮವಾರ ನಡೆದ ಸರಳ ಸಮಾರಂಭದಲ್ಲಿ ತುಂಬೆ ಗ್ರೂಪ್‌ನ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯಿದಿನ್ ತುಂಬೆ, ನಿರ್ಮಾಣ ಮತ್ತು ನವೀಕರಣ ವಿಭಾಗದ ಮತ್ತು ತುಂಬೆ ಟೆಕ್ನಾಲಜೀಸ್ ನಿರ್ದೇಶಕ ಅಕ್ರಂ ಮೊಯಿದಿನ್ ಹಾಗೂ ತುಂಬೆ ಸಮೂಹದ ಆಡಳಿತಾತ್ಮಕ ತಂಡದ ಇತರ ಸದಸ್ಯರ ಉಪಸ್ಥಿತಿಯಲ್ಲಿ ತುಂಬೆ ಗ್ರೂಪ್‌ನ ಸ್ಥಾಪಕ ಡಾ. ತುಂಬೆ ಮೊಯಿದಿನ್ ಅವರು ಕೇಕ್ ಕಟ್ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭ ತುಂಬೆ ಫಾರ್ಮಸಿ ಜಾಲದ ಮೊದಲ ರೊಬೊಟಿಕ್ ಫಾರ್ಮಸಿಯನ್ನು ಕೆಇಎಫ್ ಹೋಲ್ಡಿಂಗ್ಸ್‌ನ ಸ್ಥಾಪಕ ಮತ್ತು ಮುಖ್ಯಸ್ಥ ಫೈಝಲ್ ಇ.ಕೊಟ್ಟಿಕೊಲ್ಲೊನ್ ಹಾಗೂ ರೊ-ಮೊ ಆಪ್ಟಿಕಲ್ಸ್‌ನ್ನು ಎಇಎಫ್ ಹೋಲ್ಡಿಂಗ್ಸ್‌ನ ಉಪಾಧ್ಯಕ್ಷೆ ಶಬನಾ ಫೈಝಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ತುಂಬೆ ಮೊಯಿದಿನ್, ಅಜ್ಮನ್‌ನಲ್ಲಿ ಅತೀ ದೊಡ್ಡ ಖಾಸಗಿ ಶೈಕ್ಷಣಿಕ ಆಸ್ಪತ್ರೆ ತೆರಯುವ ಮೂಲಕ ಸದ್ಯ ಈ ಪ್ರದೇಶ ಇಡೀ ಜಗತ್ತಿದೆ ಮಾದರಿಯಾಗಿದೆ. ತುಂಬೆ ಮೆಡಿಸಿಟಿಯಲ್ಲಿ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆಯ ಭವಿಷ್ಯದ ತಾಣವಾಗಿರುವ ಆಸ್ಪತ್ರೆ ದೊಡ್ಡ ಮಟ್ಟದಲ್ಲಿ ಜನರಿಗೆ ಸೇವೆ ಸಲ್ಲಿಸಲು ಸಿದ್ಧವಾಗಿದೆ. ಇದೇ ವೇಳೆ, ದೇಶವನ್ನು ಪರಿವರ್ತಿಸುವ ಮತ್ತು ಜಾಗತಿಕ ವೈದ್ಯಕೀಯ ಪ್ರವಾಸಿ ತಾಣವಾಗಿ ಬದಲಿಸುವ ನಮ್ಮ ಪ್ರಯತ್ನವನ್ನು ಮುಂದಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News