ಉಯಿಘರ್ ಮುಸ್ಲಿಮರ ದಮನ: ಚೀನಾದ 28 ಕಂಪೆನಿಗಳು ಕಪ್ಪು ಪಟ್ಟಿಗೆ

Update: 2019-10-08 18:01 GMT
ಫೊಟೋ ಕೃಪೆ: AFP/GETTY

ವಾಶಿಂಗ್ಟನ್, ಅ. 8: ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಉಯಿಘರ್ ಮುಸ್ಲಿಮರು ಮತ್ತು ಮುಸ್ಲಿಮ್ ಅಲ್ಪಸಂಖ್ಯಾತರ ಹಕ್ಕುಗಳ ದಮನ ಮತ್ತು ಶೋಷಣೆಯಲ್ಲಿ ಶಾಮೀಲಾಗಿವೆ ಎನ್ನಲಾದ ಚೀನಾದ 28 ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಅಮೆರಿಕದ ವಾಣಿಜ್ಯ ಇಲಾಖೆ ಸೋಮವಾರ ಪ್ರಕಟಿಸಿದೆ.

ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟಿರುವ ಕಂಪೆನಿಗಳು ಅಮೆರಿಕದ ಉತ್ಪನ್ನಗಳನ್ನು ಖರೀದಿಸುವಂತಿಲ್ಲ ಎಂದು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಹೇಳಿದರು. ಚೀನಾದಲ್ಲಿನ ಜನಾಂಗೀಯ ಅಲ್ಪಸಂಖ್ಯಾತರ ಅಮಾನುಷ ದಮನವನ್ನು ಸಹಿಸಲು ಅಮೆರಿಕಕ್ಕೆ ಸಾಧ್ಯವಿಲ್ಲ ಎಂದು ಅವರು ನುಡಿದರು.

ಪಶ್ಚಿಮ ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ‘ಮರುಶಿಕ್ಷಣ’ ಶಿಬಿರಗಳಲ್ಲಿ ಸುಮಾರು 10 ಲಕ್ಷ ಉಯಿಘರ್ ಮತ್ತು ಇತರ ಮುಸ್ಲಿಮರನ್ನು ಕೂಡಿ ಹಾಕಲಾಗಿದೆ ಎಂದು ಮಾನವಹಕ್ಕು ಸಂಸ್ಥೆಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News