ಉ.ಪ್ರ. ವಿರುದ್ಧ ದಿಲ್ಲಿಗೆ ಐದು ವಿಕೆಟ್ ಗಳ ಸೋಲು

Update: 2019-10-09 01:45 GMT

ವಡೋದರ, ಅ.8: ಶಿಖರ್ ಧವನ್ ಅರ್ಧಶತಕದ ಗಳಿಸಿದ ಹೊರತಾಗಿಯೂ ವಿಜಯ ಹಝಾರೆ ಟ್ರೋಫಿಯಲ್ಲಿ ಮಂಗಳವಾರ ನಡೆದ ಱಬಿೞಗುಂಪಿನ ಪಂದ್ಯದಲ್ಲಿ ಉತ್ತರಪ್ರದೇಶ ತಂಡದ ವಿರುದ್ಧ ದಿಲ್ಲಿ ತಂಡ ಐದು ವಿಕೆಟ್‌ಗಳ ಅಂತರದಿಂದ ಸೋಲನುಭವಿಸಿತು. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಭಾರತದ ಪರ ಇನಿಂಗ್ಸ್ ಆರಂಭಿಸುವ ಧವನ್, ದಿಲ್ಲಿ ಪರ ಅಗ್ರ ಕ್ರಮಾಂಕದಲ್ಲಿ 74 ಎಸೆತಗಳಲ್ಲಿ 54 ರನ್ ಗಳಿಸಿದರು. ಆರನೇ ಕ್ರಮಾಂಕದಲ್ಲಿ ಹನುಮ ವಿಹಾರಿ 77 ಎಸೆತಗಳಲ್ಲಿ 64 ರನ್ ಗಳಿಸಿ ದಿಲ್ಲಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಲು ನೆರವಾದರು.

ಗೆಲ್ಲಲು ಸುಲಭ ಸವಾಲು ಪಡೆದಿದ್ದ ಉತ್ತರಪ್ರದೇಶ ಕಳಪೆ ಆರಂಭದಿಂದ ಚೇತರಿಸಿಕೊಂಡು ಪ್ರಿಯಾಮ್ ಗರ್ಗ್(79 ರನ್,52 ಎಸೆತ) ಹಾಗೂ ಉಪೇಂದ್ರ ಯಾದವ್(57, 62 ಎಸೆತ)ಅರ್ಧಶತಕಗಳ ಕೊಡುಗೆ ನೆರವಿನಿಂದ 29 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತು.

ಇದಕ್ಕೂ ಮೊದಲು ಮೊಹ್ಸಿನ್ ಖಾನ್ ನೇತೃತ್ವದ ಉತ್ತರಪ್ರದೇಶದ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್ ಮಾಡಿ ದಿಲ್ಲಿ ತಂಡ ದೊಡ್ಡ ಮೊತ್ತ ಗಳಿಸದಂತೆ ಕಡಿವಾಣ ಹಾಕಿದರು.

ಮೊಹ್ಸಿನ್(3-49) ಮೂರು ವಿಕೆಟ್‌ಗಳನ್ನು ಪಡೆದರೆ, ಅಂಕಿತ್ ರಾಜ್‌ಪೂತ್(2-45)2 ವಿಕೆಟ್ ಪಡೆದರು. ಮೋಹಿತ್ ಜಾಂಗ್ರಾ(1-22), ಸೌರಭ್ ಕುಮಾರ್(1-33) ಹಾಗೂ ರಿಂಕು ಸಿಂಗ್(1-21)ತಲಾ ಒಂದು ವಿಕೆಟ್ ಪಡೆದರು.

<ಹರ್ಯಾಣ ವಿರುದ್ಧ ವಿದರ್ಭಕ್ಕೆ ಸುಲಭ ಜಯ: ಮತ್ತೊಂದು ಪಂದ್ಯದಲ್ಲಿ ವಿದರ್ಭ ತಂಡ ಹರ್ಯಾಣ ವಿರುದ್ಧ 9 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ದರ್ಶನ್ ನಲ್ಕಾಂಡೆ(4-25)ನೇತೃತ್ವದ ಬೌಲರ್‌ಗಳು ಹರ್ಯಾಣಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಹರ್ಯಾಣ ನಾಯಕ ಅಮಿತ್ ಮಿಶ್ರಾ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮಿಶ್ರಾ ನಿರ್ಧಾರ ತಿರುಗುಬಾಣವಾಗಿದ್ದು, ವಿದರ್ಭ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಲಾಗದೆ 30.5 ಓವರ್‌ಗಳಲ್ಲಿ ಕೇವಲ 83 ರನ್‌ಗಳಿಗೆ ಆಲೌಟಾಯಿತು.

 ವಿದರ್ಭ ಪರ 21ರ ಹರೆಯದ ನಲ್ಕಾಂಡೆ(4-25) ಯಶಸ್ವಿ ಬೌಲರ್ ಎನಿಸಿಕೊಂಡರು. ಸಹ ವೇಗಿ ಯಶ್ ಠಾಕೂರ್(2-16), ಆಫ್ ಸ್ಪಿನ್ನರ್ ಅಕ್ಷಯ್ ವಖಾರೆ(2-15) ಹಾಗೂ ಎಡಗೈ ಸ್ಪಿನ್ನರ್ ಅಕ್ಷಯ್ ಕರ್ನೆವಾರ್(2-10) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಗೆಲ್ಲಲು 86 ರನ್ ಗುರಿ ಬೆನ್ನಟ್ಟಿದ ವಿದರ್ಭ ಜಿತೇಶ್ ಶರ್ಮಾ(11) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆರಂಭಿಕ ಆಟಗಾರ ಫೈಝ್ ಫಝಲ್(38) ಹಾಗೂ ನಾಯಕ ವಸೀಂ ಜಾಫರ್(32) ವಿದರ್ಭ ತಂಡ 20.4 ಓವರ್‌ಗಳಲ್ಲಿ 1 ವಿಕೆಟ್‌ಗಳ ನಷ್ಟಕ್ಕೆ 85 ರನ್ ಗಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News