ಐಎಎಫ್‌ನ 87ನೇ ವಾರ್ಷಿಕೋತ್ಸವ ಪರೇಡ್‌ನಲ್ಲಿ ಗ್ರೂಪ್ ಕ್ಯಾಪ್ಟನ್ ಸಚಿನ್ ತೆಂಡುಲ್ಕರ್ ಭಾಗಿ

Update: 2019-10-09 01:47 GMT

ಹೊಸದಿಲ್ಲಿ, ಅ.8: ಭಾರತೀಯ ವಾಯು ಪಡೆಯಲ್ಲಿ ಗೌರವ ಗ್ರೂಪ್ ಕ್ಯಾಪ್ಟನ್ ಪದವಿ ಪಡೆದಿರುವ ಮೊದಲ ಕ್ರೀಡಾಪಟು, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಘಾಝಿಯಾಬಾದ್‌ನಲ್ಲಿರುವ ಹಿಂಡೊನ್ ವಾಯು ನೆಲೆಯಲ್ಲ್ಲಿ ಮಂಗಳವಾರ ಭಾರತೀಯ ವಾಯು ಪಡೆಯ(ಐಎಎಫ್) 87ನೇ ವಾರ್ಷಿಕೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು. ಕಳೆದ ತಿಂಗಳು ಅಧಿಕಾರವಹಿಸಿಕೊಂಡಿರುವ ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ್ ಭಾದೌರಿಯಾ, ಸೇನೆ ಹಾಗೂ ನೌಕಾ ಪಡೆಯ ಮುಖ್ಯಸ್ಥರು ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. 2010ರ ಸೆಪ್ಟಂಬರ್‌ನಲ್ಲಿ ಗೌರವ ರ್ಯಾಂಕ್ ಱಗ್ರೂಪ್ ಕ್ಯಾಪ್ಟನ್‌ೞಆಗಿ ನೇಮಕಗೊಂಡಿದ್ದ ಸಚಿನ್ ಮಂಗಳವಾರ ಐಎಎಫ್ ಸಮವಸ್ತ್ರ ಧರಿಸಿ ಐಎಎಫ್ ಪರೇಡ್‌ನಲ್ಲಿ ಭಾಗಿಯಾದರು. ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನ ಮೂಲಕ ವಾರ್ಷಿಕೋತ್ಸವ ಸಂದೇಶವನ್ನು ಸಚಿನ್ ಹಂಚಿಕೊಂಡಿದ್ದಾರೆ.

 ‘‘ಭಾರತೀಯ ವಾಯು ಸೇನಾ ದಿನದ ಸಂಭ್ರಮದಲ್ಲಿ ಎಲ್ಲರಿಗೂ ಶುಭ ಕೋರುವೆ. ಭಾರತವನ್ನು ಸುರಕ್ಷಿತವಾಗಿಟ್ಟಿರುವ ಎಲ್ಲ ಯೋಧರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುವೆ. ಪ್ರಧಾನಮಂತ್ರಿ ಮೋದಿ ಅವರ ಸ್ವಚ್ಛ ಭಾರತ ಮಿಶನ್ ಮೂಲಕ ಭಾರತ ಸದಾಕಾಲ ಸ್ವಾಸ್ಥ ಹಾಗೂ ಸುರಕ್ಷಿತೆಯಿಂದ ಉಳಿಯಲಿ ಎಂದು ಹಾರೈಸುವೆ. ಜೈ ಹಿಂದ್’’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

 ಹಿಂಡೊನ್ ವಾಯು ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಿಗ್ ಬಿಸನ್ ವಿಮಾನವನ್ನು ಹಾರಿಸಿದರು. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ತೆಂಡುಲ್ಕರ್ ಪತ್ನಿ ಅಂಜಲಿ ತೆಂಡುಲ್ಕರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News