ಈ ದಿನ: ಪ್ರಾದೇಶಿಕ ಸೈನ್ಯ ಪದ್ಧತಿ ಆರಂಭ

Update: 2019-10-09 11:06 GMT

1799: ಬ್ರಿಟಿಷ್ ಯುದ್ಧನೌಕೆ ಎಚ್‌ಎಮ್‌ಎಸ್ ಲ್ಯೂಟಿನ್ ಡಚ್ ಕರಾವಳಿ ಪ್ರದೇಶದ ಸಮುದ್ರದಲ್ಲಿ ಮುಳುಗಿದ ಪರಿಣಾಮ 240 ಜನರು ಮೃತರಾದರು. 12 ಲಕ್ಷ ಡಾಲರ್ ವೌಲ್ಯದ ಸಾಮಗ್ರಿಗಳು ಜಲಸಮಾಧಿಯಾದವು.

1824: ಕೋಸ್ಟರಿಕಾ ದೇಶದಲ್ಲಿ ಗುಲಾಮಗಿರಿಯನ್ನು ನಿಷೇಧಿಸಲಾಯಿತು.

1949: ಭಾರತದ ಪ್ರಾದೇಶಿಕ ಸೈನ್ಯ ಪದ್ಧತಿ ಅಂದಿನ ಭಾರತದ ಗವರ್ನರ್ ಜನರಲ್ ಸಿ.ರಾಜಗೋಪಾಲಾಚಾರಿ ಅವರಿಂದ ಆರಂಭವಾಯಿತು. ಪ್ರಾದೇಶಿಕ ಸೈನ್ಯವು ಸ್ವಯಂಸೇವಕರನ್ನು ಒಳಗೊಂಡಿದ್ದು, ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಮಾತ್ರ ಅವರ ಸೇವೆಯನ್ನು ರಾಷ್ಟ್ರದ ರಕ್ಷಣೆಗಾಗಿ ಉಪಯೊೀಗಿಸಲಾಗುತ್ತದೆ.

1962: ಬ್ರಿಟಿಷರ ವಶದಲ್ಲಿದ್ದ ಉಗಾಂಡಾ ಸ್ವತಂತ್ರವಾಯಿತು.

1963: ಉತ್ತರ ಇಟಲಿಯ ಪೈವೆ ಕಣಿವೆಯಲ್ಲಿ ವ್ಯಾಜೊಂಟ್ ಅಣೆಕಟ್ಟು ಒಡೆದ ನಂತರ ಉಂಟಾದ ಭೂಕುಸಿತದ ಪರಿಣಾಮ 2,000 ಜನರು ಮೃತಪಟ್ಟರು.

1997: ಇಟಲಿಯ ಖ್ಯಾತ ನಾಟಕಕಾರ ಡ್ಯಾರಿಯೊ ಫೋ ಅವರಿಗೆ ಸಾಹಿತ್ಯದ ನೊಬೆಲ್ ಪ್ರದಾನಿಸಲಾಯಿತು.

2012: ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್‌ಝಾಯಿ ಅವರು ವಾಯವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯಲ್ಲಿ ತಾಲಿಬಾನಿ ಬಂದೂಕುಧಾರಿಯೊಬ್ಬನಿಂದ ಗುಂಡಿನ ದಾಳಿಗೆ ಒಳಗಾದರು.

1877: ಸಮಾಜ ಸುಧಾರಕ, ರಾಜಕಾರಣಿ, ಪತ್ರಕರ್ತ, ಕವಿ ಗೋಪಬಂಧು ದಾಸ್ ಜನ್ಮದಿನ.

1897: ಸ್ವಾತಂತ್ರ ಹೋರಾಟಗಾರ, ಮದ್ರಾಸ್ ರಾಜ್ಯದ 6ನೇ ಮುಖ್ಯಮಂತ್ರಿ ಎಂ.ಭಕ್ತವತ್ಸಲಂ ಜನ್ಮದಿನ.

1945: ಭಾರತದ ಶಾಸ್ತ್ರೀಯ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಜನ್ಮದಿನ.

1969: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜನ್ಮದಿನ.

2006: ಬಹುಜನ ಸಮಾಜ ಪಕ್ಷ ಸ್ಥಾಪಕ, ದಲಿತ ನಾಯಕ ಕಾನ್ಶೀರಾಂ ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ