2019-20ರ ಭಾರತದ ಜಿಡಿಪಿ ಅಂದಾಜನ್ನು ಶೇ 6.2ರಿಂದ ಶೇ 5.8ಕ್ಕೆ ಇಳಿಸಿದ 'ಮೂಡೀಸ್'

Update: 2019-10-10 09:10 GMT

ಹೊಸದಿಲ್ಲಿ, ಅ.10: ಆರ್ಥಿಕ ವರ್ಷ 2019-2020ರಲ್ಲಿ ಭಾರತದ ಜಿಡಿಪಿ ಶೇ 6.2ರಷ್ಟಾಗಬಹುದೆಂದು ಈ ಹಿಂದೆ ಅಂದಾಜಿಸಿದ್ದ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್  ಗುರುವಾರ  ತನ್ನ ಅಂದಾಜು ಪ್ರಮಾಣವನ್ನು ಇಳಿಸಿ ಭಾರತದ ಜಿಡಿಪಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 5.8ರಷ್ಟಾಗಬಹುದೆಂದು ಹೇಳಿದೆ. ಭಾರತದ ಆರ್ಥಿಕ ಹಿಂಜರಿತದಿಂದ ಹೀಗಾಗಿದೆ ಎಂದು ಸಂಸ್ಥೆ ಹೇಳಿದೆ.

ಮೂಡೀಸ್ ಜಿಡಿಪಿ ಅಂದಾಜು, ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವಾರವಷ್ಟೇ ಪ್ರಕಟಿಸಿದ ಶೇ 6.1ಕ್ಕಿಂತ ಬಹಳಷ್ಟು ಕಡಿಮೆಯಾಗಿದೆ.

ಹೂಡಿಕೆಯಲ್ಲಿನ ಕುಸಿತ, ಜತೆಗೆ ಗ್ರಾಮೀಣ ಕುಟುಂಬಗಳನ್ನು ಕಾಡುತ್ತಿರುವ ಆರ್ಥಿಕ ಒತ್ತಡದಿಂದ ಕುಸಿಯುತ್ತಿರುವ ಬೇಡಿಕೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಇಳಿಕೆಯಿಂದ ಅಂದಾಜು ಜಿಡಿಪಿಯಲ್ಲಿ ಇಳಿಕೆಯಾಗಿದೆ ಎಂದು ಮೂಡೀಸ್ ಹೇಳಿದೆ. ಸಂಸ್ಥೆಯ ಪ್ರಕಾರ ಭಾರತದ ಅಭಿವೃದ್ಧಿ ದರ 2020-21ರಲ್ಲಿ ಶೇ 6.6ಕ್ಕೆ ಏರಿ ಮುಂದೆ ಶೇ 7ರಷ್ಟಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News