ಯುವತಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ದುಷ್ಕರ್ಮಿ

Update: 2019-10-10 10:05 GMT

ಕೊಚ್ಚಿ, ಅ.10: ಯುವತಿಯೊಬ್ಬಳ ಬೆನ್ನುಬಿದ್ದಿದ್ದ 22 ವರ್ಷದ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ಕೊಂದ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಈ ಸಂದರ್ಭ ಉಂಟಾದ ಸುಟ್ಟ ಗಾಯಗಳಿಂದ ಯುವಕ ಕೂಡ ಸಾವನ್ನಪ್ಪಿದ್ದಾನೆ.

ಮೃತ ಯುವತಿ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಆಕೆಯನ್ನು ಆತ ಕಳೆದೊಂದು ವರ್ಷದಿಂದ ಹಿಂಬಾಲಿಸುತ್ತಿದ್ದನೆಂದು ಆಕೆಯ ಹೆತ್ತವರು ಹೇಳಿದ್ದಾರೆ. ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಆತ ಆಕೆಯನ್ನು ಹಿಂಬಾಲಿಸುವುದನ್ನು ನಿಲ್ಲಿಸಿರಲಿಲ್ಲ. ನಂತರ ಹೆತ್ತವರು ದೂರು ದಾಖಲಿಸಿದ್ದರಿಂದ ಮಂಗಳವಾರ ಆತನನ್ನು ವಿಚಾರಣೆಗೆ ಠಾಣೆಗೆ ಬರ ಹೇಳಲಾಗಿತ್ತು.

ಗುರುವಾರ ಮುಂಜಾನೆ ಆರೋಪಿ ಯುವಕ ಕಕ್ಕನಾಡ್ ಪ್ರದೇಶದಲ್ಲಿರುವ ಯುವತಿಯ ಮನೆಗೆ ನುಗ್ಗಿ ಆಕೆಯನ್ನು ಭೇಟಿಯಾಗಬೇಕೆಂದು ಬಲವಂತಪಡಿಸಿದ್ದ. ಆಕೆ ಎದುರಿಗೆ ಬರುತ್ತಿದ್ದಂತೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಹೆತ್ತವರು ಓಡಿ ಬರುವಷ್ಟರಲ್ಲಿ  ಇಬ್ಬರೂ ಸುಟ್ಟು ಕರಕಲಾಗಿದ್ದರು. ಯುವತಿ ಸ್ಥಳದಲ್ಲಿಯೇ ಮೃತಪಟ್ಟರೆ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಯುವತಿಯ ತಂದೆಗೆ ಕೂಡ ಈ ಸಂದರ್ಭ ಗಾಯಗಳಾಗಿವೆ.  ಬೊಬ್ಬೆ ಕೇಳಿ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News