ಓಲ್ಗಾ ಟೊಕಾರ್ಝಕ್, ಪೀಟರ್ ಹ್ಯಾಂಡ್ಕೆಗೆ ಸಾಹಿತ್ಯ ಕ್ಷೇತ್ರದ ನೊಬೆಲ್

Update: 2019-10-10 16:37 GMT

ಸ್ಟಾಕ್‌ಹೋಂ,ಅ.10: ಸ್ವೀಡನ್ ಮೂಲದ ಅಕಾಡಮಿ ಗುರುವಾರ ಸಾಹಿತ್ಯ ವಿಭಾಗದಲ್ಲಿ ಎರಡು ನೋಬೆಲ್ ಪ್ರಶಸ್ತಿಗಳನ್ನು ಘೋಷಿಸಿದೆ. 2018ರ ಸಾಲಿನಲ್ಲಿ ಪೋಲೆಂಡ್ ಲೇಖಕಿ ಓಲ್ಗ ಟೊಕರ್‌ಚುಕ್ ಸಾಹಿತ್ಯ ನೋಬೆಲ್ ಗೆದ್ದುಕೊಂಡಿದ್ದರೆ, 2019ರ ಸಾಲಿನಲ್ಲಿ ಆಸ್ಟ್ರೀಯದ ಸಾಹಿತಿ ಪೀಟರ್ ಹ್ಯಾಂಡ್ಕೆ ಸಾಹಿತ್ಯ ನೋಬೆಲ್ ತನ್ನದಾಗಿಸಿಕೊಂಡಿದ್ದಾರೆ.

ವಿಜೇತರು ಡಿಸೆಂಬರ್ 10ರಂದು ಅಲ್ಫ್ರೆಡ್ ನೋಬೆಲ್ ಅವರ ಪುಣ್ಯತಿಥಿಯಂದು ಸ್ಟಾಕ್‌ ಹೋಂನಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮದಲ್ಲಿ ಸ್ವೀಕರಿಸಲಿದ್ದಾರೆ. ಜೀವನದ ರೂಪವಾಗಿ ಗಡಿಗಳನ್ನು ದಾಟುವುದನ್ನು ವಿಶ್ವಕೋಶದ ಒಲವಿನೊಂದಿಗೆ ಕಾಲ್ಪನಿಕವಾಗಿ ವಿವರಿಸಿರುವ ರೀತಿಯಿಂದ ಟೊಕರ್ಝಕ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ನೋಬೆಲ್ ಸಮಿತಿ ಅಭಿಪ್ರಾಯಿಸಿದೆ.

57ರ ಹರೆಯದ ಮನಃಶಾಸ್ತ್ರಜ್ಞೆ ಟೊಕರ್ಝಕ್ ತನ್ನ ಫ್ಲೈಟ್ಸ್ ಎಂಬ ಪುಸ್ತಕಕ್ಕೆ 2018ರಲ್ಲಿ ಮ್ಯಾನ್ ಬೂಕರ್ ಅಂತರ್‌ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದರು. ಟೊಕರ್ಝಕ್ ಅವರ ಕೆಲವು ಪ್ರಮುಖ ಪುಸ್ತಕಗಳೆಂದರೆ’, ಡ್ರೈವ್ ಯುವರ್ ಫ್ಲೋ ಓವರ್ ದ ಬೋನ್ಸ್ ಆಫ್ ದ ಡೆಡ್’ (2018)(2009ರಲ್ಲಿ ಅವರು ಈ ಪುಸ್ತಕವನ್ನು ಪೊಲಿಶ್ ಭಾಷೆಯಲ್ಲಿ ಬರೆದಿದ್ದರು, 2007ರ ಬೀಗುನಿ (ಇಂಗ್ಲಿಶ್‌ನಲ್ಲಿ ಫ್ಲೈಟ್ಸ್-2017), ಡೊಮ್ ಝೀನಿ, ಡೊಮ್ ನೊಸ್ನಿ, 1998 (ಹೌಸ್ ಆಫ್ ಡೇ, ಹೌಸ್ ಆಫ್ ನೈಟ್-2002) ಮತ್ತು ಅವರಿಗೆ ಅತೀಹೆಚ್ಚು ಜನಪ್ರಿಯತೆ ತಂದುಕೊಟ್ಟ 2014ರಲ್ಲಿ ಮುದ್ರಣಗೊಂಡ ಸೇಗಿ ಜಕುಬೊ ಅಥವಾ ಬುಕ್ಸ್ ಆಫ್ ಜಾಕೊಬ್.

ಆಸ್ಟ್ರಿಯ ಮೂಲದ ಪೀಟರ್ ಹ್ಯಾಂಡ್ಕೆ 2019ರ ಸಾಲಿನ ನೋಬೆಲ್ ಸಾಹಿತ್ಯ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಭಾಷಾವರು ದಕ್ಷತೆಯೊಂದಿಗೆ ಮಾನವ ಅನುಭವದ ಪರಿಧಿ ಮತ್ತು ನಿಖರತೆಯನ್ನು ಅನ್ವೇಷಿಸಿದ ಪ್ರಭಾವಿ ಕೆಲಸಕ್ಕಾಗಿ ಹ್ಯಾಂಡ್ಕೆಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಸಮಿತಿ ತಿಳಿಸಿದೆ. ಹ್ಯಾಂಡ್ಕೆ, ಉಬೆರ್ ಡೈ ಡೊರ್ಫರ್-1981 (ವಾಕ್ ಅಬೌಟ್ ದ ವಿಲೆಜಸ್-2015) ಎಂಬ ನಾಟಕ, ಡೈ ವೈಡರ್‌ಹೊಲಂಗ್, 1986 (ರಿಪಿಟೀಶನ್-1988) ಎಂಬ ಕಾದಂಬರಿ ಮತ್ತು ಡೈ ಓಸ್ಟಿಡಿಬಿನ್ ಓಡರ್ ಇಂಫಶೆ ಫಹ್‌ರ್ಟ್ ಇನ್ಸ್ ಲಂಡೆಸಿನ್ನರ್ (2017) ಕಾದಂಬರಿಯನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News