ಅ.18ರಿಂದ 6 ವಿಮಾನ ನಿಲ್ದಾಣಗಳಲ್ಲಿ ಇಂಧನ ಪೂರೈಕೆ ನಿಲ್ಲಿಸುವ ಎಚ್ಚರಿಕೆ

Update: 2019-10-10 18:16 GMT

ಹೊಸದಿಲ್ಲಿ,ಅ.10: ಸರಕಾರಿ ಸ್ವಾಮ್ಯದ ಪ್ರಮುಖ ತೈಲ ಮಾರಾಟ ಸಂಸ್ಥೆಗಳು ಅ.18ರೊಳಗೆ ಏಕಗಂಟಿನಲ್ಲಿ ಮಾಸಿಕ ಬಿಲ್ ಪಾವತಿಸದಿದ್ದರೆ ಆರು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಧನ ಪೂರೈಕೆಯನ್ನು ನಿಲ್ಲಿಸುವುದಾಗಿ ಏರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿವೆ.

 ಇಂಧನ ಪೂರೈಕೆಗೆ ಹಣ ಪಾವತಿಯು ಎಂಟು ತಿಂಗಳು ವಿಳಂಬಗೊಂಡಿದ್ದು,ಬಾಕಿ ಮೊತ್ತ 5,000 ಕೋ.ರೂ.ಗಳನ್ನು ಮೀರಿದೆ ಎಂದು ಐಒಸಿ,ಬಿಪಿಸಿಎಲ್ ಮತ್ತು ಎಚ್‌ಪಿಸಿ ಈ ಮೊದಲು ಹೇಳಿದ್ದವು.

ಆ.22ರಂದು ಈ ಮೂರೂ ಕಂಪನಿಗಳು ಹಣ ಪಾವತಿ ಬಾಕಿಯಿದ್ದ ಹಿನ್ನೆಲೆಯಲ್ಲಿ ಕೊಚ್ಚಿ, ಮೊಹಾಲಿ, ಪುಣೆ, ಪಾಟ್ನಾ, ರಾಂಚಿ ಮತ್ತು ವಿಶಾಖಪಟ್ಟಣಂ ವಿಮಾನ ನಿಲ್ದಾಣಗಳಲ್ಲಿ ಏರ್‌ಇಂಡಿಯಾಕ್ಕೆ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದ್ದವು. ನಾಗರಿಕ ವಾಯುಯಾನ ಸಚಿವಾಲಯದ ಹಸ್ತಕ್ಷೇಪದ ಬಳಿಕ ಸೆ.7ರಂದು ಇಂಧನ ಪೂರೈಕೆಯನ್ನು ಪುನರಾರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News