ಟೆಸ್ಟ್ ನಾಯಕತ್ವ: ಗಂಗುಲಿ ದಾಖಲೆ ಮುರಿದ ಕೊಹ್ಲಿ

Update: 2019-10-11 04:48 GMT

ಪುಣೆ, ಅ.10: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಿದ ವಿರಾಟ್ ಕೊಹ್ಲಿ ಮಾಜಿ ನಾಯಕ ಸೌರವ್ ಗಂಗುಲಿ ಅವರ ದಾಖಲೆಯನ್ನು ಮೀರಿ ನಿಂತರು. ಕೊಹ್ಲಿ ಭಾರತದ ಪರ 50 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವವಹಿಸಿಕೊಂಡ ಎರಡನೇ ನಾಯಕನಾಗಿದ್ದಾರೆ. ಗಂಗುಲಿ 2000ರಿಂದ 2005ರ ತನಕ 49 ಟೆಸ್ಟ್ ಪಂದ್ಯಗಳಲ್ಲಿ ಭಾರತದ ನಾಯಕನಾಗಿದ್ದರು. ಎಂಎಸ್ ಧೋನಿ 2008ರಿಂದ 2014ರ ತನಕ 60 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಸಾರಥ್ಯವಹಿಸಿದ್ದರು. ಟೆಸ್ಟ್ ನಾಯಕನಾಗಿ ಹೊಸ ಮೈಲುಗಲ್ಲು ತಲುಪಿದ ಕೊಹ್ಲಿಗೆ ಬಿಸಿಸಿಐ ಟ್ವಿಟರ್‌ನ ಮೂಲಕ ಅಭಿನಂದನೆ ಸಲ್ಲಿಸಿದೆ.

ಕೊಹ್ಲಿ ಭಾರತದ ಓರ್ವ ಯಶಸ್ವಿ ಟೆಸ್ಟ್ ನಾಯಕನಾಗಿದ್ದಾರೆ. 2014ರಲ್ಲಿ ಟೆಸ್ಟ್ ನಾಯಕತ್ವವಹಿಸಿಕೊಂಡ ಬಳಿಕ ಭಾರತಕ್ಕೆ 29 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಧೋನಿ 60 ಪಂದ್ಯಗಳಲ್ಲಿ 27 ಗೆಲುವು ಪಡೆದಿದ್ದಾರೆ. ಗಂಗುಲಿ ನಾಯಕತ್ವದಲ್ಲಿ ಭಾರತ 21 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿತ್ತು.

ದ.ಆಫ್ರಿಕದ ಮಾಜಿ ನಾಯಕ ಗ್ರೇಮ್ ಸ್ಮಿತ್ ಗರಿಷ್ಠ ಟೆಸ್ಟ್ ಪಂದ್ಯಗಳನ್ನು ಜಯಿಸಿದ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸ್ಮಿತ್ 109 ಪಂದ್ಯಗಳಲ್ಲಿ 53ರಲ್ಲಿ ಜಯ ಸಾಧಿಸಿದ್ದರು. ರಿಕಿ ಪಾಂಟಿಂಗ್ 48 ಪಂದ್ಯಗಳಲ್ಲಿ ಜಯಶಾಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News