ಎರಡನೇ ಟೆಸ್ಟ್: ವಿರಾಟ್ ಕೊಹ್ಲಿ 26ನೇ ಶತಕ

Update: 2019-10-11 06:02 GMT

ಪುಣೆ,ಅ.11:ಭಾರತದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೆ ದಿನವಾದ ಶುಕ್ರವಾರ 26ನೇ ಶತಕ ಸಿಡಿಸಿ ಗಮನ ಸೆಳೆದರು.

ಔಟಾಗದೆ 63 ರನ್‌ನಿಂದ 2ನೇ ದಿನದಾಟವನ್ನು ಮುಂದುವರಿಸಿದ ಕೊಹ್ಲಿ 173 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು. ಫಿಲ್ಯಾಂಡರ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕೊಹ್ಲಿ 81ನೇ ಪಂದ್ಯದಲ್ಲಿ ಮೂರಂಕೆಯನ್ನು ದಾಖಲಿಸಿದರು. ಈ ವರ್ಷ ಕೊಹ್ಲಿ ಗಳಿಸಿದ ಮೊದಲ ಟೆಸ್ಟ್ ಶತಕ ಇದಾಗಿದೆ.

ನಾಯಕನಾಗಿ 50ನೇ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ಅವರು ಅಜಿಂಕ್ಯ ರಹಾನೆ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 150 ರನ್ ಸೇರಿಸಿದ್ದಾರೆ. ಭಾರತ 111 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 348 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News