ಜಪಾನ್‌ನತ್ತ ಧಾವಿಸಿ ಬರುತ್ತಿರುವ ಪ್ರಬಲ ಚಂಡಮಾರುತ

Update: 2019-10-11 18:49 GMT

ಟೋಕಿಯೊ, ಅ. 11: ಪ್ರಬಲ ಚಂಡಮಾರುತವೊಂದು ಜಪಾನ್‌ನತ್ತ ಧಾವಿಸಿ ಬರುತ್ತಿದ್ದು, 60 ವರ್ಷಗಳಲ್ಲೇ ಅಧಿಕ ಮಳೆ ಮತ್ತು ವೇಗದ ಗಾಳಿಯನ್ನು ಅದು ತನ್ನೊಂದಿಗೆ ತರುತ್ತಿದೆ ಎಂದು ನಿರೀಕ್ಷಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿಗಳು, ಕಾರ್ಖಾನೆಗಳು ಮತ್ತು ಸಬ್‌ವೇ ರೈಲುಗಳನ್ನು ಮುಚ್ಚಲಾಗಿದೆ. ಚಂಡಮಾರುತದಿಂದಾಗಿ ಫಾರ್ಮುಲಾ ವನ್ ಗ್ರಾನ್ ಪ್ರಿ ಮತ್ತು ರಗ್ಬಿ ವಿಶ್ವಕಪ್‌ಗೆ ಅಡಚಣೆಯಾಗಿದೆ.

ಫಿಲಿಪ್ಪೀನ್ಸ್ ಭಾಷೆ ‘ಟಗಲೊಗ್’ನಲ್ಲಿ ‘ವೇಗ’ ಎಂಬ ಅರ್ಥ ಹೊಂದಿರುವ ‘ಹಗಿಬಿಸ್’ ಚಂಡಮಾರುತ ಜಪಾನ್‌ನ ಪ್ರಧಾನ ದ್ವೀಪ ಹೊಂಶುಗೆ ಶನಿವಾರ ಅಪ್ಪಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News