ದಿವಿಜ್ ಶರಣ್ ಏಶ್ಯದ ಅಗ್ರ-ರ್ಯಾಂಕಿನ ಡಬಲ್ಸ್ ಆಟಗಾರ

Update: 2019-10-12 03:10 GMT

ಹೊಸದಿಲ್ಲಿ, ಅ.11: ಎಟಿಪಿ ಡಬಲ್ಸ್ ಟೆನಿಸ್ ರ್ಯಾಂಕಿಂಗ್‌ನಲ್ಲಿ ದಿವಿಜ್ ಶರಣ್ ಭಾರತದ ನಂ.1 ಹಾಗೂ ಏಶ್ಯದ ಅಗ್ರ-ರ್ಯಾಂಕಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಮೂರು ಸ್ಥಾನ ಭಡ್ತಿ ಪಡೆದಿರುವ ಶರಣ್ ವಿಶ್ವದ ನಂ.42ನೇ ಸ್ಥಾನದಲ್ಲಿದ್ದಾರೆ.

 ‘‘ಈ ಮೈಲುಗಲ್ಲು ತಲುಪಿದ್ದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ. ಇದು ನನ್ನ ಜೀವನದಲ್ಲಿ ಮರೆಯಲಾರದ ಕ್ಷಣ’’ ಎಂದು ಟೋಕಿಯೋ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿರುವ ಶರಣ್ ಪಿಟಿಐಗೆ ತಿಳಿಸಿದರು.

ದಿಲ್ಲಿಯ ಎಡಗೈ ಆಟಗಾರ ಶರಣ್ ಕನ್ನಡಿಗ ರೋಹನ್ ಬೋಪಣ್ಣ ಜೊತೆ ಡಬಲ್ಸ್ ಪಂದ್ಯವನ್ನಾಡುತ್ತಿದ್ದು, ಟಾಟಾ ಓಪನ್ ಮಹಾರಾಷ್ಟ್ರ ಪ್ರಶಸ್ತಿಯನ್ನು ಜಯಿಸುವ ಮೂಲಕ ಹೊಸ ಋತು ಆರಂಭಿಸಿದ್ದಾರೆ.

ಶರಣ್ ಹಾಗೂ 44ನೇ ರ್ಯಾಂಕಿನಲ್ಲಿರುವ ಬೋಪಣ್ಣ ಕೇಂದ್ರ ಸರಕಾರದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್(ಟಾಪ್ಸ್)ನ ಫಲಾನುಭವಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News