ಬೆಂಗಳೂರಿನಲ್ಲಿ ಅ.13ರಂದು ‘ಹುಸೇನ್ ದಿನ’ ಆಚರಣೆ

Update: 2019-10-12 16:09 GMT

ಬೆಂಗಳೂರು, ಅ.12: ರಾಜಧಾನಿ ಬೆಂಗಳೂರಿನಲ್ಲಿ ಅ.13ರಂದು ಮಧ್ಯಾಹ್ನ 3.30ಕ್ಕೆ ಜಾನ್ಸನ್ ಮಾರ್ಕೆಟ್ ಬಳಿಯಿರುವ ಶಿಯಾ ಆರಾಮ್‌ಗಾ(ಖಬರಸ್ಥಾನ) ಆವರಣದಲ್ಲಿ 27ನೇ ವಾರ್ಷಿಕ ‘ಹುಸೇನ್ ದಿನ’ವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಸಂಚಾಲಕ ಆಗಾ ಸುಲ್ತಾನ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಯಕ್ರಮದಲ್ಲಿ ಭಾರತದಲ್ಲಿನ ಇರಾನ್ ದೇಶದ ರಾಯಭಾರಿ ಡಾ.ಅಲಿ ಚೆಗಿನಿ ಪ್ರಧಾನ ಭಾಷಣ ಮಾಡಲಿದ್ದಾರೆ. ಬೌದ್ಧ ಧಾರ್ಮಿಕ ಮುಖಂಡ ಲಾಮಾ ದುಬೂಮ್ ತುಲ್ಕು, ಜೈನ ಧರ್ಮದ ಮುಖಂಡ ಆಚಾರ್ಯ ಡಾ.ಲೋಕೇಶ್ ಮುನಿ, ಸಿಖ್ಖ್ ಧರ್ಮದ ಗುರು ಪ್ರೊ.ಜಿ.ಎಸ್. ಚಾವ್ಲಾ, ಕೈಸ್ತ ಮುಖಂಡ ರೆವರೆಂಡ್ ಮೊನ್‌ಸಿಗ್ನೋರ್ ಎಸ್.ಜಯನಾಥನ್, ಸ್ವಾಮಿ ಸಾರಂಗ್‌ಜಿ ಮಹಾರಾಜ್, ಅಲ್ಲಾಮ ಶಬೀರ್ ಅಲಿ ವಾರ್ಸಿ ಮಾತನಾಡಲಿದ್ದಾರೆ ಎಂದರು.

ರಂಗಭೂಮಿ ಕಲಾವಿದ ಆಮಿರ್ ರಝಾ ಹುಸೇನ್, ಪ್ರೊ. ಸಯ್ಯದ್ ಐನುಲ್ ಹಸನ್ ಆಬಿದಿ, ಶಕೀಲ್ ಹಸನ್ ಶಮ್ಸಿ, ಡಾ.ಮುಹಮ್ಮದ್ ಅಬ್ಬಾಸ್ ಖಾಕಿ, ಶೈಲೇಂದ್ರ ಸಿಂಗ್ ಚೌಹಾಣ್ ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಲಾನ ಡಾ.ಹಸನ್ ಕುಮೈಲಿ ವಹಿಲಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News