ಈ ದಿನ: ‘ಟೈರೋಸ್ ಎನ್’ ಉಡಾವಣೆ

Update: 2019-10-12 18:34 GMT

1884: ವಿಶ್ವದ ಸಮಯವನ್ನು ಸೂಚಿಸುವ ಲಂಡನ್‌ನ ಗ್ರೀನ್‌ವಿಚ್ ವೀಕ್ಷಣಾಲಯವನ್ನು ಆರಂಭಿಸಲಾಯಿತು.

1917: ಸೋವಿಯತ್ ಒಕ್ಕೂಟವು ಪೆಟ್ರೊಗ್ರಾಡ್ ಮಿಲಿಟರಿ ಎಂಬ ಹೊಸ ಕ್ರಾಂತಿಕಾರಿ ಸೈನ್ಯ ಸಮಿತಿಯನ್ನು ಆರಂಭಿಸಿತು.

1941: ಜರ್ಮನ್ ನಾಝಿ ಸೈನ್ಯವು ಮಕ್ಕಳು, ವೃದ್ಧರು ಸೇರಿದಂತೆ 11,000 ಯಹೂದಿ ಜನರನ್ನು ಹತ್ಯೆಗೈಯಿತು.

1943: ಇಟಲಿಯು ತನ್ನ ಹಳೆಯ ಮಿತ್ರರಾಷ್ಟ್ರ ಜರ್ಮನಿ ವಿರುದ್ಧ ಯುದ್ಧ ಸಾರಿತು.

1944: ಎರಡನೇ ವಿಶ್ವ ಮಹಾಯುದ್ಧದ ಭಾಗವಾಗಿ ಅಮೆರಿಕದ ಪ್ರಥಮ ಸೈನ್ಯವು ಜರ್ಮನ್‌ನ ಆಚೆನ್ ನಗರವನ್ನು ವಶಪಡಿಸಿಕೊಂಡಿತು.

1969: ಸೋವಿಯತ್ ರಶ್ಯದ ‘ಸೋಯುಝ್ 8’ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು.

1972: ಏರೋಫ್ಲಾಟ್-62 ಹೆಸರಿನ ರಶ್ಯನ್ ವಿಮಾನವು ಮಾಸ್ಕೋ ಸಮೀಪದ ದೊಡ್ಡ ಸರೋವರವೊಂದರಲ್ಲಿ ಪತನಗೊಂಡಿತು. ಪರಿಣಾಮ 176 ಜನರು ಪ್ರಾಣ ಕಳೆದುಕೊಂಡರು.

1976: ಬೋಲಿವಿಯಾ ಪಶ್ಚಿಮ ಭಾಗದ ಸಾಂತಾಕ್ರೂಝ್ ನಗರದ ಜನನಿಬಿಡ ಬೀದಿಯಲ್ಲಿ ಬೋಯಿಂಗ್ 707 ಹೆಸರಿನ ವಿಮಾನವು ಕಟ್ಟಡಗಳ ಮೇಲೆ ಪತನಗೊಂಡ ಪರಿಣಾಮ 100 ಜನರು ಸಾವಿಗೀಡಾದರು.

1978: ಅಮೆರಿಕದ ಪ್ರಥಮ 3ನೇ ಪೀಳಿಗೆಯ ಹವಾಮಾನ ಉಪಗ್ರಹ ‘ಟೈರೋಸ್ ಎನ್’ ಅನ್ನು ಉಡಾವಣೆ ಮಾಡಲಾಯಿತು.

1994: ಜಪಾನ್‌ನ ಲೇಖಕ ಕೆಂಜಾಬುರೋ ಒಯ್‌ಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

2016: ಅಮೆರಿಕನ್ ಗಾಯಕ, ಕವಿ ಬಾಬ್ ಡೈಲಾನ್ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಗೆ ಭಾಜನರಾದರು.

2016: ಕಾಮನ್‌ವೆಲ್ತ್ ರಾಷ್ಟ್ರಗಳಿಂದ ಹಿಂದೆ ಸರಿಯುವ ನಿರ್ಧಾರವನ್ನು ಮಾಲ್ಡೀವ್ಸ್ ಪ್ರಕಟಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ