​ಟರ್ಕಿ ಮೇಲೆ ದಿಗ್ಬಂಧನ ಹೇರಿದ ಟ್ರಂಪ್ ಹೇಳಿದ್ದೇನು ?

Update: 2019-10-15 03:57 GMT

ವಾಷಿಂಗ್ಟನ್: ಈಶಾನ್ಯ ಸಿರಿಯಾ ಮೇಲೆ ಟರ್ಕಿ ಮಿಲಿಟರಿ ದಾಳಿ ನಡೆಸಿದ್ದನ್ನು ಖಂಡಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟರ್ಕಿ ಅಧಿಕಾರಿಗಳ ವಿರುದ್ಧ ದಿಗ್ಬಂಧನ ಹೇರಿದ್ದಾರೆ. ಉಕ್ಕಿನ ಮೇಲಿನ ಸುಂಕವನ್ನು ಹೆಚ್ಚಿಸಿರುವುದಲ್ಲದೇ, 100 ಶತಕೊಟಿ ಡಾಲರ್ ಮೌಲ್ಯದ ವ್ಯಾಪರ ಒಪ್ಪಂದ ಮಾತುಕತೆಯನ್ನು ಕೈಬಿಡುವುದಾಗಿ ಘೋಷಿಸಿದ್ದಾರೆ.

ಕಳೆದ ಬುಧವಾರ ಸಿರಿಯಾದಿಂದ ಸೇನೆಯನ್ನು ವಾಪಾಸು ಪಡೆಯಲು ಅಮೆರಿಕ ನಿರ್ಧರಿಸಿದ ಬಳಿಕ ಟರ್ಕಿ, ಖುರ್ದಿಷ್ ಹೋರಾಟಗಾರರ ವಿರುದ್ಧ ದಾಳಿ ನಡೆಸಿತ್ತು. ಸೇನೆ ಹಿಂದಕ್ಕೆ ಪಡೆಯುವ ಟ್ರಂಪ್ ನಿರ್ಧಾರವನ್ನು ರಿಪಬ್ಲಿಕನ್ ಪಕ್ಷದ ಮುಖಂಡರು, ಖುರ್ದ್‌ಗಳಿಗೆ ಮಾಡಿದ ದ್ರೋಹ ಎಂದು ಬಣ್ಣಿಸಿದ್ದರು.

"ಗಂಭೀರ ಮಾನವ ಹಕ್ಕು ಉಲ್ಲಂಘನೆ, ಶಾಂತಿಗೆ ಭಂಗ, ಸ್ಥಳಾಂತರಗೊಂಡ ಜನ ತಮ್ಮ ಹುಟ್ಟೂರಿಗೆ ಮರಳುವುದನ್ನು ತಡೆಯುವುದು, ಬಲಾತ್ಕಾರದಿಂದ ನಿರಾಶ್ರಿತರನ್ನು ವಾಪಾಸು ಕಳುಹಿಸುವುದು, ಸಿರಿಯಾದ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ಅಪಾಯ ಒಡ್ಡುವ ಕಾರಣಕ್ಕಾಗಿ ಟರ್ಕಿ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧ ಜಾರಿಗೊಳಿಸಲು ಈ ಆದೇಶದ ಮೂಲಕ ಅನುಮತಿ ನೀಡಲಾಗುತ್ತಿದೆ" ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.

ಟರ್ಕಿ ನಾಯಕರು ಈ ಅಪಾಯಕಾರಿ ಹಾಗೂ ವಿಧ್ವಂಸಕ ಮಾರ್ಗ ತುಳಿಯುವುದನ್ನು ಮುಂದುವರಿಸಿದರೆ ಆ ದೇಶದ ಆರ್ಥಿಕತೆಯನ್ನು ಧ್ವಂಸಗೊಳಿಸಲು ಸಿದ್ಧ ಎಂದ ಟ್ರಂಪ್, ಟರ್ಕಿಯ ಹಾಲಿ ಹಾಗೂ ಮಾಜಿ ನಾಯಕರ ವಿರುದ್ಧ ದಿಗ್ಬಂಧನ ವಿಧಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News