ಪಂಜಾಬ್ ತಂಡದಲ್ಲಿ ಸ್ಥಾನ ಉಳಿಸಿಕೊಂಡ ಅಶ್ವಿನ್

Update: 2019-10-15 05:49 GMT

ಹೊಸದಿಲ್ಲಿ, ಅ.14: ಕಿಂಗ್ಸ್ ಇಲೆವೆನ್ ಪಂಜಾಬ್ ಆಡಳಿತ ಮಂಡಳಿಯು ಮರು ಯೋಚಿಸಿದ ಬಳಿಕ ರವಿಚಂದ್ರನ್ ಅಶ್ವಿನ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಟ್ಟುಕೊಡದಿರಲು ನಿರ್ಧರಿಸಿದ್ದೇವೆ ಎಂದು ಪಂಜಾಬ್ ಫ್ರಾಂಚೈಸಿಯ ಸಹ ಮಾಲಕ ನೆಸ್ ವಾಡಿಯಾ ಸೋಮವಾರ ತಿಳಿಸಿದರು.

 ಇತ್ತೀಚೆಗೆ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಅನಿಲ್ ಕುಂಬ್ಳೆ ಅವರು ಅಶ್ವಿನ್‌ರನ್ನು ತಂಡದಲ್ಲೇ ಉಳಿಸಿಕೊಳ್ಳಲು ಒಲವು ತೋರಿದ್ದರು ಎಂದು ತಿಳಿದುಬಂದಿದೆ. ಅಶ್ವಿನ್ ಕಳೆದ ಎರಡು ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್‌ನ ನಾಯಕನಾಗಿದ್ದರು.

 ಅಶ್ವಿನ್ ನಾಯಕತ್ವದಲ್ಲಿ ಪಂಜಾಬ್ ಕಳೆದ ಆವೃತ್ತಿಯ ಮೊದಲಾರ್ಧದಲ್ಲಿ ಭಾರೀ ಭರವಸೆ ಮೂಡಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ತನ್ನ ತೀವ್ರತೆ ಕಳೆದುಕೊಂಡಿತು. 2019ರ ಐಪಿಎಲ್‌ನಲ್ಲಿ ಆರನೇ ಸ್ಥಾನ ಪಡೆದಿತ್ತು. ಟೀಮ್ ಇಂಡಿಯಾದಲ್ಲಿ ಟೆಸ್ಟ್‌ನಲ್ಲಿ ಮಾತ್ರ ಆಡುತ್ತಿರುವ ಅಶ್ವಿನ್ ಈಗ ನಡೆಯುತ್ತಿರುವ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News