'ದೇಶ ಒಡೆಯುವ ಆರೆಸ್ಸೆಸ್ ನಿಷೇಧವಾಗಲಿ': ಸಿಖ್ ಸಮುದಾಯದ ಅತ್ಯುನ್ನತ ಸಂಸ್ಥೆ ಅಕಾಲ್ ತಖ್ತ್

Update: 2019-10-15 07:09 GMT

ಚಂಡೀಗಢ, ಅ.15: ಆರೆಸ್ಸೆಸ್ಸನ್ನು ನಿಷೇಧಿಸಬೇಕೆಂಬ ಬೇಡಿಕೆಯನ್ನು ಸಿಖ್ ಸಮುದಾಯದ ಅತ್ಯುನ್ನತ ಸಂಸ್ಥೆ ಅಕಾಲ್ ತಖ್ತ್  ಮುಂದಿಟ್ಟಿದೆ. ಈ ಸಂಘಟನೆಯನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಟ್ಟರೆ ಅದು ಕೇವಲ ದೇಶವನ್ನು ಒಡೆಯಬಹುದು ಎಂದು ಅಕಾಲ್ ತಖ್ತ್ ಹೇಳಿದೆ.

"ಆರೆಸ್ಸೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ದೇಶದ ಹಿತಾಸಕ್ತಿಯಲ್ಲಿಲ್ಲ'' ಎಂದು ಅಕಾಲ್ ತಖ್ತ್ ಮುಖ್ಯಸ್ಥ ಗ್ಯಾನಿ ಹರ್‍ಪ್ರೀತ್ ಸಿಂಗ್ ಅಮೃತಸರ್‍ ನಲ್ಲಿ ಮಾಧ್ಯಮದ ಜತೆ ಮಾತನಾಡುತ್ತಾ ಹೇಳಿದರು.

ಸಿಖ್ ಸಂಘಟನೆಯೊಂದು ಆರೆಸ್ಸೆಸ್ ವಿರುದ್ಧ ಕಿಡಿ ಕಾರುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ವಾರವಷ್ಟೇ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ಖಂಡಿಸಿತ್ತು. ದಸರಾ ಸಮಾರಂಭವೊಂದರಲ್ಲಿ ಮಾತನಾಡಿದ್ದ  ಭಾಗವತ್ "ಭಾರತ ಒಂದು ಹಿಂದು ರಾಷ್ಟ್ರವಾಗಿರುವುದರಿಂಣದ ಇಲ್ಲಿರುವವರೆಲ್ಲರೂ ಹಿಂದುಗಳು,''ಎಂದು ಹೇಳಿದ್ದಕ್ಕೆ ಸಮಿತಿ ಆಕ್ಷೇಪ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News