ನೊಬೆಲ್ ಪುರಸ್ಕೃತ ಅಭಿಜಿತ್‌ಗೆ 'ಅರ್ಥಶಾಸ್ತ್ರದ ವಿದ್ಯಾರ್ಥಿ' ಮನಮೋಹನ ಸಿಂಗ್ ಹೇಳಿದ್ದೇನು?

Update: 2019-10-16 03:50 GMT

ಹೊಸದಿಲ್ಲಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಯವರನ್ನು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ ಸಿಂಗ್ ಅಭಿನಂದಿಸಿದ್ದಾರೆ.

ಬಡತನ ನಿರ್ಮೂಲನೆ ಮತ್ತು ಹೊಸ ತಂತ್ರಗಳ ಅಭಿವೃದ್ಧಿ ಕುರಿತ ಅವರ ಕೃತಿಗಳು ನಿಜಕ್ಕೂ ಮಾರ್ಗದರ್ಶಿ ಎಂದು ಬಣ್ಣಿಸಿದ್ದಾರೆ.

ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಬ್ಯಾನರ್ಜಿಯವರ ಅನುಶೋಧನೆಗಳು ಭಾರತದಂಥ ಅಭಿವೃದ್ಧಿಶೀಲ ದೇಶಗಳ ನೀತಿ ರೂಪಿಸಲು ಅನ್ವಯಿಸಬಹುದಾದದ್ದು ಮತ್ತು ಉಪಯುಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕೃತರಾದ ಭಾರತೀಯ ಮೂಲದ ಎರಡನೇ ವ್ಯಕ್ತಿ ಎನ್ನುವುದು ಹೆಮ್ಮೆಯ ವಿಷಯ ಎಂದು ಬ್ಯಾನರ್ಜಿಯವರಿಗೆ ಬರೆದ ಪತ್ರದಲ್ಲಿ ಮನಮೋಹನ ಸಿಂಗ್ ಅಭಿನಂದಿಸಿದ್ದಾರೆ.

"ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಭಾರತದಂಥ ಅಭಿವೃದ್ಧಿಶೀಲ ದೇಶಗಳ ನೀತಿ ರೂಪಿಸಲು ಅನ್ವಯಿಸಬಹುದಾದ ಮತ್ತು ಉಪಯುಕ್ತ ಅಭಿವೃದ್ಧಿ ಅರ್ಥಶಾಸ್ತ್ರದ ಅನುಶೋಧನೆಯನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿರುವುದು ಅತೀವ ಸಂತಸ ತಂದಿದೆ ಎಂದು ಸಂದೇಶದಲ್ಲಿ ಹೇಳಿದ್ದಾರೆ.

1998ರಲ್ಲಿ ಅಮರ್ತ್ಯಸೇನ್ ಅರ್ಥಶಾಸ್ತ್ರದಲ್ಲಿ ನೊಬೆಲ್ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News