‘ನ್ಯಾಯಾಲಯದೊಂದಿಗೆ ಕಣ್ಣಾಮುಚ್ಚಾಲೆ ಆಡಬೇಡಿ’: ಈ.ಡಿ. ವಿರುದ್ಧ ಹೈಕೋರ್ಟ್ ಆಕ್ರೋಶ

Update: 2019-10-17 15:56 GMT

ಹೊಸದಿಲ್ಲಿ,ಅ.17: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ಮೇಲೆ ವಾದಿಸಲು ಗುರುವಾರ ಜಾರಿ ನಿರ್ದೇಶನಾಲಯ (ಈ.ಡಿ.)ದ ವಕೀಲರ ಅಲಭ್ಯತೆಯಿಂದ ಕೆಂಡಾಮಂಡಲಗೊಂಡ ದಿಲ್ಲಿ ಉಚ್ಚ ನ್ಯಾಯಾಲಯವು ತನಿಖಾ ಸಂಸ್ಥೆಯನ್ನು ತೀವ್ರ ತರಾಟೆಗೆತ್ತಿಕೊಂಡಿತು.

 ನ್ಯಾಯಾಲಯದಲ್ಲಿ ಹಾಜರಿದ್ದ ಈ.ಡಿ. ಪರ ವಕೀಲರು,ಜಾಮೀನು ಅರ್ಜಿಯ ಮೇಲೆ ವಾದಿಸಬೇಕಿರುವ ವಕೀಲರು ರೋಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯದಲ್ಲಿ ವ್ಯಸ್ತರಾಗಿರುವುದರಿಂದ 30 ನಿಮಿಷಗಳ ಕಾಲಾವಕಾಶವನ್ನು ಕೋರಿದಾಗ ಕೋಪಗೊಂಡ ನ್ಯಾ.ಸುರೇಶ ಕೈಟ್ ಅವರು,ನೀವು ನ್ಯಾಯಾಲಯದೊಂದಿಗೆ ಕಣ್ಣಾ ಮುಚ್ಚಾಲೆ ಆಡುವಂತಿಲ್ಲ. ಇದು ಸ್ವೀಕಾರಾರ್ಹವಲ್ಲ.ನ್ಯಾಯಾಲಯವು ಯಾರಿಗೂ ಕಾಯುವುದಿಲ್ಲ ಎಂದು ಹೇಳಿದರು.

ಡಿಕೆಶಿ ಅರ್ಜಿಯ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದ ಉಚ್ಚ ನ್ಯಾಯಾಲಯವು,ಅ.19ರಂದು ಮಧ್ಯಾಹ್ನ 12 ಗಂಟೆಯೊಳಗೆ ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸುವಂತೆ ಈ.ಡಿ.ಪರ ವಕೀಲರಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News