ಪಿಎಂಸಿ ಬ್ಯಾಂಕ್ ಹಗರಣ: ಮಾಜಿ ನಿರ್ದೇಶಕ ಅ. 22ರ ವರೆಗೆ ಪೊಲೀಸ್ ಕಸ್ಟಡಿಗೆ

Update: 2019-10-17 17:42 GMT

ಮುಂಬೈ, ಅ. 17: ಪಂಜಾಬ್ ಹಾಗೂ ಮಹಾರಾಷ್ಟ್ರ ಕೋ-ಆಪರೇಟಿವ್ (ಪಿಎಂಸಿ) ಬ್ಯಾಂಕ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಸುರ್ಜೀತ್ ಸಿಂಗ್ ಅರೋರಾಗೆ ಮುಂಬೈ ನ್ಯಾಯಾಲಯ ಗುರುವಾರ ಅಕ್ಟೋಬರ್ 22ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.

ಅರೋರಾ ಅವರನ್ನು ಮುಂಬೈ ಪೊಲೀಸ್ ಆರ್ಥಿಕ ಅಪರಾದ ವಿಭಾಗ ಬಂಧಿಸಿತ್ತು. ನ್ಯಾಯಾಲಯ ಬ್ಯಾಂಕ್‌ನ ಮಾಜಿ ಆಡಳಿತ ನಿರ್ದೇಶಕ ಜೋಯ್ ಥೋಮಸ್‌ಗೆ ಕೂಡ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪಿಎಂಸಿ ಬ್ಯಾಂಕ್‌ನ 4,355 ಕೋಟಿ ರೂಪಾಯಿ ಹಗರಣ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ತನಿಖಾ ಸಂಸ್ಥೆ ಸಮನ್ಸ್ ನೀಡಿದ ಬಳಿಕ ಬುಧವಾರ ಆರ್ಥಿಕ ಅಪರಾಧ ವಿಭಾಗ ಅರೋರಾನನ್ನು ಬಂಧಿಸಿತ್ತು.

ಅರೋರಾನನ್ನು ಗುರುವಾರ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಎಸ್.ಜಿ. ಶೇಖ್ ಮುಂದೆ ಹಾಜರುಪಡಿಸಲಾಯಿತು. ಅವರು ಅಕ್ಟೋಬರ್ 22ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತನಾಗಿರುವ ಆರನೇ ಆರೋಪಿ ಅರೋರಾ. ಪಿಎಂಸಿ ಬ್ಯಾಂಕ್‌ನ ನಿರ್ದೇಶಕನಾಗಿ ಅರೋರಾ ಕಾರ್ಯ ನಿರ್ವಹಿಸಿದ್ದ ಹಾಗೂ ಬ್ಯಾಂಕ್‌ನ ಸಾಲ ಸಮಿತಿಯಲ್ಲಿ ಇದ್ದ ಎಂದು ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News