ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ ಶಿವಸೇನೆಗೆ ಸೇರ್ಪಡೆ

Update: 2019-10-19 05:13 GMT

ಮುಂಬೈ, ಅ.19: ಮಹಾರಾಷ್ಟ್ರ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ದೀರ್ಘಕಾಲದ ಆಪ್ತ, ಅಂಗರಕ್ಷಕ ಗುರುಮೀತ್ ಸಿಂಗ್ ಅಲಿಯಾಸ್ ಶೇರಾ ಶುಕ್ರವಾರ ಶಿವಸೇನೆಗೆ ಸೇರ್ಪಡೆಯಾದರು.

ಶಿವಸೇನೆ ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಈ ಸುದ್ದಿಯನ್ನು ಘೋಷಿಸಿದೆ.

ಶೇರಾ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಹಾಗೂ ಯುವ ಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಸಮ್ಮುಖದಲ್ಲಿ ಠಾಕ್ರೆ ಅಧಿಕೃತ ನಿವಾಸ ಮಾತೋಶ್ರೀಯಲ್ಲಿ ಪಕ್ಷಕ್ಕೆ ಸೇರಿದರು.

ಮಹಾರಾಷ್ಟ್ರ ಚುನಾವಣೆಯು ಅಕ್ಟೋಬರ್ 21ರಂದು ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News