ಕಮಲೇಶ್ ತಿವಾರಿ ಹತ್ಯೆ ಪ್ರಕರಣ: ಸೂರತ್‌ನಲ್ಲಿ ಆರು ಜನರ ಬಂಧನ

Update: 2019-10-19 06:05 GMT

ಅಹ್ಮದಾಬಾದ್, ಅ.19: ಹಿಂದೂ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕಮಲೇಶ್ ತಿವಾರಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್‌ನ ಎಟಿಎಸ್, ಸೂರತ್ ಪೊಲೀಸ್ ಹಾಗೂ ಉತ್ತರಪ್ರದೇಶ ಪೊಲೀಸರು ಶನಿವಾರ ಸೂರತ್‌ನಲ್ಲಿ ಆರು ಜನರನ್ನು ಬಂಧಿಸಿದ್ದಾರೆ.

ದೀಪಾವಳಿ ಸಿಹಿತಿಂಡಿ ಪೊಟ್ಟಣ ನೀಡುವ ನೆಪದಲ್ಲಿ ಲಕ್ನೋದಲ್ಲಿರುವ ತಿವಾರಿ ಮನೆಗೆ ತೆರಳಿದ್ದ ಇಬ್ಬರು ದುಷ್ಕರ್ಮಿಗಳು ಶುಕ್ರವಾರ ಹಾಡಹಗಲೇ ಭೀಕರ ಹತ್ಯೆಗೈದು ಪರಾರಿಯಾಗಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಓರ್ವ ಹಂತಕ ತಿವಾರಿಯ ಗಂಟಲು ಸೀಳಿದರೆ, ಮತ್ತೊಬ್ಬ ಗುಂಡುಹಾರಿಸಿದ್ದ.

ಮೂವರು ಹಂತಕರು ಸೂರತ್‌ನ ಧರ್ತಿ ಸ್ವೀಟ್ ಮಾರ್ಟ್‌ನಲ್ಲಿ ಸ್ವೀಟ್ ಬಾಕ್ಸ್ ಖರೀದಿಸುತ್ತಿರುವ ಸಿಸಿಟಿವಿ ಫುಟೇಜ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರು ಶಂಕಿತರನ್ನು ತಮ್ಮ ತಂಡ ವಿಚಾರಣೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News