ರೋಹಿತ್, ಮಾಯಾಂಕ್‌ರಿಂದ ಐತಿಹಾಸಿಕ ಸಾಧನೆ

Update: 2019-10-19 18:15 GMT

ರಾಂಚಿ, ಅ.19: ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಮಾಯಾಂಕ್ ಅಗರ್ವಾಲ್ ಮೊದಲ ಎರಡು ಪಂದ್ಯಗಳಲ್ಲಿ ಶತಕವನ್ನು ಸಿಡಿಸುವುದರೊಂದಿಗೆ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಮೂರನೇ ಪಂದ್ಯದಲ್ಲಿ ಮಾಯಾಂಕ್ ದೊಡ್ಡ ಮೊತ್ತ ಗಳಿಸಲು ವಿಫಲವಾದರು. ಆದರೆ, ರೋಹಿತ್ ಸರಣಿಯಲ್ಲಿ 3ನೇ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಈ ಹಿಂದೆ ನಡೆಯದ ಸಾಧನೆಯನ್ನು ಮಾಡಿತು. ರೋಹಿತ್-ಮಾಯಾಂಕ್ ಜೋಡಿ ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ಶತಕಗಳನ್ನು ಸಿಡಿಸಿದ ಅತ್ಯಮೋಘ ಸಾಧನೆ ಮಾಡಿತು. 1932ರಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ಬಳಿಕ ಭಾರತ ಮೊದಲ ಬಾರಿ ಈ ಸಾಧನೆ ಮಾಡಿದ್ದು ಗಮನಾರ್ಹ. ಭಾರತದ ಇಬ್ಬರು ಆರಂಭಿಕರು ಸರಣಿಯಲ್ಲಿ ಮೊದಲ ಬಾರಿ ಐದು ಶತಕಗಳನ್ನು ಸಿಡಿಸಿದರು. 1971ರಲ್ಲಿ ಸುನೀಲ್ ಗವಾಸ್ಕರ್ ಏಕಾಂಗಿಯಾಗಿ ವೆಸ್ಟ್ ಇಂಡೀಸ್ ವಿರುದ್ಧ 4 ಶತಕಗಳನ್ನು ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News