ನಾರ್ಮನ್ ಬೊರ್ಲಾಗ್‌ಗೆ ನೊಬೆಲ್ ಶಾಂತಿ ಪುರಸ್ಕಾರ

Update: 2019-10-19 18:20 GMT

1926: ಕ್ಯೂಬಾದಲ್ಲಿ ಬೀಸಿದ ಪ್ರಬಲ ಚಂಡಮಾರುತಕ್ಕೆ 600 ಜನರು ಬಲಿಯಾದ ಘಟನೆ ವರದಿಯಾಗಿದೆ.

1935: ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಫ್ಯಾಶಿಸಂನ್ನು ವಿರೋಧಿಸಿ ಸುಮಾರು 4,00,000 ಜನರು ಬೃಹತ್ ಪ್ರತಿಭಟನೆ ನಡೆಸಿದರು.

1935: ಚೀನಾದ ಶಾಂಕ್ಷಿ ಪ್ರಾಂತದ ಯಾನಾನ್‌ನಲ್ಲಿ ಕಮ್ಯುನಿಸ್ಟ್ ಪಡೆಗಳು ಹಮ್ಮಿಕೊಂಡಿದ್ದ ದೀರ್ಘ ನಡಿಗೆ(ಲಾಂಗ್ ಮಾರ್ಚ್) ಕೊನೆಗೊಂಡಿತು.

1952: ಕೀನ್ಯಾದಲ್ಲಿ ಬ್ರಿಟಿಷರ ವಸಾಹತೀಕರಣ ವಿರುದ್ಧದ ಹೋರಾಟ ತೀವ್ರಗೊಂಡ ಕಾರಣ ತುರ್ತುಪರಿಸ್ಥಿತಿಯನ್ನು ಘೋಷಿಸಲಾಯಿತು.

1962: ನಿರಂತರ ಸಂಘರ್ಷದ ನಂತರ ಭಾರತ ಮತ್ತು ಚೀನಾದ ಮಧ್ಯೆ ನಿರ್ಣಾಯಕ ಯುದ್ಧ ಆರಂಭವಾಯಿತು. ವಿವಾದಿತ ಪ್ರದೇಶಗಳಲ್ಲಿ ಹಾಗೂ ಗಡಿಗಳಲ್ಲಿ ಎರಡೂ ದೇಶಗಳು ಯುದ್ಧತಂತ್ರ ಕೌಶಲವನ್ನು ತೋರಿದವು. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಎರಡು ಬೃಹತ್ ದಾಳಿಗಳನ್ನು ಭಾರತದ ಮೇಲೆ ನಡೆಸಿತು. ಈ ಎರಡು ದಾಳಿಗಳು ಸಾಂಕೇತಿಕವಾಗಿ ಹಿಮಾಲಯದ ಎರಡು ನೆರೆಹೊರೆ ದೇಶಗಳ ಮಧ್ಯೆ ಯುದ್ಧ ಆರಂಭವಾದುದನ್ನು ಸೂಚಿಸಿತು.

1970: ವಿಶ್ವಾದ್ಯಂತ ‘ಹಸಿರು ಕ್ರಾಂತಿ’ ವ್ಯಾಪಕವಾಗಲು ಕಾರಣರಾದ ಅಮೆರಿಕದ ನಾರ್ಮನ್ ಬೊರ್ಲಾಗ್‌ಗೆ ನೊಬೆಲ್ ಶಾಂತಿ ಪುರಸ್ಕಾರ ಪ್ರದಾನಿಸಲಾಯಿತು.

1991: ಭಾರತದ ಉತ್ತರಕಾಶಿಯಲ್ಲಿ ಸಂಭವಿಸಿದ 6.1-7.1 ಕಂಪನಾಂಕದ ಭೂಕಂಪನದಲ್ಲಿ 670 ಜನರು ಸಾವಿಗೀಡಾದ ಘಟನೆ ವರದಿಯಾಗಿದೆ.

1923: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಜನ್ಮದಿನ.

1963: ಭಾರತದ ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ನಾಯಕ, ಪಂಜಾಬ್ ಸಚಿವ ನವಜೋತ್‌ಸಿಂಗ್ ಸಿಧು ಜನ್ಮದಿನ.

1978: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಜನ್ಮದಿನ.

2010: ಭಾರತದ ಖ್ಯಾತ ಕ್ರಿಕೆಟಿಗ ಪಾರ್ಥಸಾರಥಿ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ