ದಿಲ್ಲಿ ಹಾಫ್ ಮ್ಯಾರಥಾನ್: ಪ್ರಶಸ್ತಿ ಉಳಿಸಿಕೊಂಡ ಬೆಲಿಹು, ಗೆಮೆಚು

Update: 2019-10-20 17:55 GMT

ಹೊಸದಿಲ್ಲಿ, ಅ.20: ಹಾಲಿ ಚಾಂಪಿಯನ್‌ಗಳಾದ ಅಂಡಮ್ಲಾಕ್ ಬೆಲಿಹು ಹಾಗೂ ತೆಸೆಯ್ ಗೆಮೆಚು ರವಿವಾರ ನಡೆದ 15ನೇ ಆವೃತ್ತಿಯ ಏರ್‌ಟೆಲ್ ದಿಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ಇಥಿಯೋಪಿಯದ ಬೆಲಿಹು 59.10 ಸೆಕೆಂಡ್‌ನಲ್ಲಿ ಗುರಿ ತಲುಪಿ ಕಳೆದ ವರ್ಷಕ್ಕಿಂತ(59.18)ಬೇಗನೆ ಗುರಿ ತಲುಪಿದರು. ಬೆಲಿಹು ಸಹ ಓಟಗಾರ ಸೊಲೊಮನ್ ಬೆರಿಹು(59.17 ಸೆ.) ಹಾಗೂ ಕೀನ್ಯದ ಕಿಬಿವಾಟ್(59.33)ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು.

ಮತ್ತೊಂದೆಡೆ, ಗೆಮೆಚು ಜೀವನಶ್ರೇಷ್ಠ 66.00 ಸೆಕೆಂಡ್‌ನಲ್ಲಿ ಗುರಿ ತಲುಪಿ ಗಮನ ಸೆಳೆದರು. ಯೆಲಾಂಝೆರ್ಫ್ (66.01)2ನೇ ಹಾಗೂ ಝೈನೆಬಾ ಯಿಮೆರ್(66.57 ಸೆ.)ಮೂರನೇ ಸ್ಥಾನ ಪಡೆದರು. ಭಾರತದ ಪುರುಷರ ವಿಭಾಗದಲ್ಲಿ ಶ್ರೀನು ಬುಗಾಥಾ(1:4:33)ಮೊದಲ ಸ್ಥಾನ ಪಡೆದರೆ, ಸುರೇಶ್ ಪಟೇಲ್(1:04:57) ಹಾಗೂ ಹರ್ಷದ್(1:05:12)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು. ಮಹಿಳೆಯರವಿಭಾಗದಲ್ಲಿ ಎಲ್. ಸೂರಿಯಾ (1:12:49 ಸೆ.) ಪ್ರಥಮ ಸ್ಥಾನ, ಪಾರುಲ್ ಚೌಧರಿ(1:13:55) ಹಾಗೂ ಚಿಂಟಾ ಯಾದವ್(1:15:28)2 ಹಾಗೂ 3ನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News