ದುಬೈಯಲ್ಲಿ ದಸರಾ ಕ್ರೀಡೋತ್ಸವ- 2019

Update: 2019-10-21 19:03 GMT

ಅಬುಧಾಬಿ, ಅ.21: ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಮತ್ತು ದುಬೈ ಯುವರಾಜ ಹಿಸ್ ಹೈನೆಸ್ ಶೇಕ್ ಹಂದಾನ್ ಬಿನ್ ಮುಹಮ್ಮದ್ ಬಿನ್ ಅಲ್ ಮಕ್ತುಂ ಕರೆಕೊಟ್ಟಿರುವ ದುಬೈ ಫಿಟ್ನೆಸ್ ಚಾಲೆಂಜ್ ಕಾರ್ಯದಲ್ಲಿ ಯುಎಇ ಕನ್ನಡಿಗರು ಪಾಲ್ಗೊಂಡು ಎರಡನೇ ವರ್ಷದ ದುಬೈ ದಸರಾ ಕ್ರೀಡೋತ್ಸವ ಪ್ರತಿಷ್ಠಿತ ಎತಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ವಿಜೃಂಭಣೆಯಿಂದ ಆಚರಿಸಿದರು.

ಈ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸುಮಾರು 3000ಕ್ಕೂ ಹೆಚ್ಚಿನ ಕನ್ನಡಿಗರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಓಟಗಾರ್ತಿ, ಅರ್ಜುನ ಪ್ರಶಸ್ತಿ ವಿಜೇತೆ ಶ್ರೀಮತಿ ಅಶ್ವಿನಿ ನಾಚಪ್ಪ ದುಬೈ ದಸರಾ ಪ್ರವೇಶ ದ್ವಾರ ಉದ್ಘಾಟಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಎಮ್ ಸ್ಕ್ವೇರ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಮಾಲಕ ಮುಹಮ್ಮದ್ ಮುಸ್ತಫಾ ಹಾಗೂ ಸಾವಿರಾರು ಮಕ್ಕಳು ಮಾರ್ಚ್ ಫಾಸ್ಟ್ ಮಾಡಿದರು.

ಈ ಸಂದರ್ಭದಲ್ಲಿ ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಶಶಿಧರ್, ಸೆಂತಿಲ್ ಬೆಂಗಳೂರು, ಮಧು ದಾವಣಗೆರೆ, ಮಮತಾ ಮೈಸೂರು, ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ, ಡಾ.ಸವಿತಾ ಮೈಸೂರು, ಹಾದಿಯ ಮಂಡ್ಯ, ಅನಿತಾ ಬೆಂಗಳೂರು, ವಿಷ್ಣುಮೂರ್ತಿ ಮೈಸೂರು, ವೆಂಕಟೇಶ್ ಮೇಲುಕೋಟೆ ಸೇರಿ ಅನೇಕ ಗಣ್ಯರು ಹಾಜರಿದ್ದರು.

ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕಿ ಪೂಜಾ ಹಾಸನ, ಕರ್ನಾಟಕ ವಾಲಿಬಾಲ್ ತಂಡದ ಮಾಜಿ ನಾಯಕಿ ಮತ್ತು ಭಾರತ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ ಡಾ.ಕವಿತಾ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. 'ಕ್ರೀಡಾ ರತ್ನ ಪ್ರಶಸ್ತಿಯನ್ನು' ಅಶ್ವಿನಿ ನಾಚಪ್ಪ ಅವರಿಗೆ ನೀಡಿ ಗೌರವಿಸಲಾಯಿಯಿತು.

ಈ ಸಂದರ್ಭದಲ್ಲಿ ಎಮ್ ಸ್ಕ್ವೇರ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಮಾಲಕ ಮುಹಮ್ಮದ್ ಮುಸ್ತಫಾ, ಅರಬ್ ನಾಗರಿಕ ಹಿಸ್ ಎಕ್ಸಲನ್ಸಿ ಶೇಕ್ ಅಬ್ದುಲ್ಲಾ ಬಿನ್ ಅಬ್ದುಲ್ಲಾ, ಕ್ಯಾಪ್ರಿಸ್ ಸಿಇಓ ಎಮ್ ಎಸ್ ಖಾನ್, ಝೈನ್ ಇಂಟೆರ್ನ್ಯಾಷನಲ್ ಹೋಟೆಲ್ ಮಾಲಕ ಶ್ರೀಯುತ ಝಫರುಲ್ಲಾ ಖಾನ್ ಮಂಡ್ಯ, ಫಾರ್ಚ್ಯೂನ್ ಗ್ರೂಪ್ ಆ ಹೋಟೆಲ್ಸ್ ಎಂಡಿ ಶ್ರೀಯುತ ಪ್ರವೀಣ್ ಶೆಟ್ಟಿ, ರೇವಾ ಮೆಡಿಕಲ್ ಸೆಂಟರ್ ಮಾಲಕ ಡಾ.ರಶ್ಮಿ, ಶ್ರೀಯುತ ಮೋಹನ್ ಉಪ್ಪಿನ್, ಡಾ.ಗುರುಮಾದವ ರಾವ್, ಶ್ರೀಯುತ ಚೇತನ್, ಮತ್ತು ಶ್ರೀಯುತ ಶೇಖರ್ ರೆಡ್ಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಮಮತಾ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News